ವರ್ತೂರ್ ಪ್ರಕಾಶ್ಗೆ ಕುರುಬ ಸಂಘದಿಂದ ಸನ್ಮಾನ
ಕೋಲಾರ: ಶ್ರೀನಿವಾಸಪುರ ತಾಲೂಕು ಕುರುಬರ ಸಂಘದ ವತಿಯಿಂದ ಕೋಲಾರ ಕ್ಷೇತ್ರದ ಶಾಸಕರಾಗಿ ಎರಡನೇ ಬಾರಿಗೆ ಆಯ್ಕೆಗೊಂಡಿರುವ ಆರ್. ವರ್ತೂರು ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ನಗರದ ಬೈರೇಗೌಡ ನಗರದಲ್ಲಿರುವ ಶಾಸಕರ ನಿವಾಸದಲ್ಲಿ ಕುರುಬ ಸಂಘದ ಪದಾಧಿಕಾರಿಗಳು ವರ್ತೂರು ಪ್ರಕಾಶ್ ಅವರನ್ನು ಅಭಿನಂದಿಸಿ ಮಾತನಾಡಿ ಕ್ಷೇತ್ರದ ಒಳಿತಿಗೆ ಮತ್ತು ಗೆಲುವಿಗೆ ಕಾರಣರಾದ ಮತದಾರರ ಆಶೋತ್ತರಗಳಿಗೆ ಮತ್ತಷ್ಟು ಸ್ಪಂದಿಸಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಂ. ವೇಮಣ್ಣ, ಉಪಾಧ್ಯಕ್ಷ ಸಿ.ಟಿ. ವೆಂಕಟರಮಣಪ್ಪ, ಕಾರ್ಯದರ್ಶಿ ಕೆ.ವಿ. ಮಂಜುನಾಥ್, , . ನಾರಾಯಣಗೌಡ, ಡಾ. ಮಂಜುನಾಥ್ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.