'ವರ್ಲ್ಡ್ 10 ಕೆ ಬೆಂಗಳೂರು 2013': ನಾಳೆ ವಾಹನ ಸಂಚಾರ ಬದಲು
ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ 'ಟಿಸಿಎಸ್ ವರ್ಲ್ಡ್ 10 ಕೆ ಬೆಂಗಳೂರು 2013' ಕಾರ್ಯಕ್ರಮ ನಡೆಯಲಿದೆ.ಬೆಳಗ್ಗೆ 11 ರಿಂದ ಸಂಜೆ 6 ಗಂಟೆವರೆಗೆ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸುತ್ತ ಸಂಚಾರ ವ್ಯವಸ್ಥೆ ಬದಲಿಸಲಾಗಿದೆ. ಕಾರ್ಯಕ್ರಮಕ್ಕೆ ಬರುವವರಿಗೆ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.ಕಾರ್ಯಕ್ರಮ ಮುಗಿಯುವವರೆಗೂ ಸಂಚಾರ ವ್ಯವಸ್ಥೆ ತಾತ್ಕಾಲಿಕವಾಗಿ ಬದಲಿಸಲಾಗಿದ್ದು, ಸಾರ್ವಜನಿಕರು ಸಹಕರಿಹಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.ಸಂಚಾರ ನಿಷೇಧ:ಕಸ್ತೂರಬಾ ರಸ್ತೆ, ಎಂ.ಜಿ.ರಸ್ತೆ, ಕಾಮರಾಜ ರಸ್ತೆ, ಡಿಕಿನ್ಸನ್ ರಸ್ತೆ, ಹಲಸೂರು ರಸ್ತೆ, ಕಬ್ಬನ್ ರಸ್ತೆ, ಕ್ವೀನ್ಸ್ ರಸ್ತೆ, ಅಂಬೇಡ್ಕರ್ ರಸ್ತೆ, ಗೋಪಾಲಗೌಡ ವೃತ್ತ, ಅಂಬೇಡ್ಕರ್ ಬೀದಿ, ಕಬ್ಬನ್ಪಾರ್ಕ್ ಒಳಗೆ ಹೋಗುವುದನ್ನು ಹಾಗೂ ಹಡ್ಸನ್ ವೃತ್ತದಲ್ಲಿ ಸಂಚಾರ ನಿಷೇಧಿಸಲಾಗಿದೆ.ಸಂಚಾರಕ್ಕೆ ಪರ್ಯಾಯ ರಸ್ತೆ:-ಜೆ.ಸಿ.ರಸ್ತೆಯಿಂದ ವಿಧಾನಸೌಧ, ಶಿವಾಜಿನಗರ ಮತ್ತು ರಾಜಭವನ ರಸ್ತೆ ಕಡೆಗೆ ಹೋಗುವವರು ಪೊಲೀಸ್ ಕಾರ್ನರ್, ಕೆ.ಜಿ.ರಸ್ತೆ, ಹಳೇ ಅಂಚೆ ಕಚೇರಿ ರಸ್ತೆ, ಕೆ.ಆರ್.ವೃತ್ತದ ಮೂಲಕ ಸಂಚರಿಸಬಹುದು.-ಜೆ.ಸಿ.ರಸ್ತೆ, ನೃಪತುಂಗ ರಸ್ತೆ ಕಡೆಯಿಂದ ಹಳೇ ಮದ್ರಾಸ್ ರಸ್ತೆ, ಎಂ.ಜಿ.ರಸ್ತೆ, ಹಲಸೂರು, ಮಾರತ್ಹಳ್ಳಿ ಕಡೆಗೆ ಹೋಗುವವರು ಹಡ್ಸನ್ ವೃತ್ತದಿಂದ ದೇವಾಂಗ ರಸ್ತೆ, ಮಿಷನ್ ರಸ್ತೆ, ರಿಚ್ಮಂಡ್ ರಸ್ತೆಯ ಮೇಲ್ಸೇತುವೆ, ರೆಸಿಡೆನ್ಸಿ ರಸ್ತೆ ಮೂಲಕ ಸಾಗಬಹುದು.- ಶಿವಾಜಿನಗರ ಕಡೆಯಿಂದ ಹೋಗುವ ವಾಹನ ಸವಾರರು ಬಾಳೇಕುಂದ್ರಿ ವೃತ್ತ, ಕನ್ನಿಂಗ್ಹ್ಯಾಂ ರಸ್ತೆ, ಚಂದ್ರಿಕಾ ಹೋಟೆಲ್, ಎಲ್.ಆರ್.ಡಿ.ಇ, ಬಸವೇಶ್ವರ ವೃತ್ತದ ಮುಖಾಂತರ ಸಂಚರಿಸಬಹುದು.- ಬಾಳೆಕುಂದ್ರಿ ವೃತ್ತದಿಂದ ಬರುವ ವಾಹನ ಸವಾರರು ಸಂಚಾರ ವಿಭಾಗದ ಮುಖ್ಯಕಚೇರಿಯ ಜಂಕ್ಷನ್, ಇನ್ಪೆಂಟ್ರಿ ರಸ್ತೆ ಮೂಲಕ ಸಂಚರಿಸುವುದು.