ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಎರಡು ತಲೆ ಹೆಣ್ಣು ಶಿಶು ಜನನ

Vishwanath S
Updated On : 21 May 2013, 12:20 pm

ಆನೇಕಲ್:  ತಾಲೂಕಿನ ಹೊಸರಸ್ತೆ,  ಚನ್ನಕೇಶವ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮಾಲಾಶ್ರೀ-ವೆಂಕಟೇಶ್ ಎಂಬ ದಂಪತಿಗೆ ಅಪರೂಪದ 2 ತಲೆಯ ಮಗು ಜನಿಸಿದೆ. ಈ ದಂಪತಿ ಮೂಲತ: ರಾಯಚೂರಿನವರಾಗಿದ್ದು ಉದ್ಯೋಗ ನಿಮಿತ್ತ ಹೊಸರಸ್ತೆಯಲ್ಲಿ ವಾಸಿಸುತ್ತಿದ್ದರು. ಸೋಮವಾರ ಬೆಳಗ್ಗೆ ಹೆರಿಗೆ ನೋವೆಂದು ಆಸ್ಪತ್ರೆಗೆ ದಾಖಲಾದಾಗ ಸ್ಕ್ಯಾನಿಂಗ್ ಮಾಡಿದ ವೈದ್ಯರು ಹೆರಿಗೆಗೆ ಸಲಹೆ ನೀಡಿದರು. ಹೆರಿಗೆ ನಂತರ ಎರಡು ತಲೆಯ ಹೆಣ್ಣು ಮಗು ಜನಿಸಿತು. ಮಗುವಿನ ಎಡ ಕಿವಿ ಹಾಗೂ ಭುಜಕ್ಕೆ ಹೊಂದಿಕೊಂಡಂತೆ ಇನ್ನೊಂದು ತಲೆ ಇರುವುದು ಗೋಚರಿಸಿತು. ಎರಡನೆ ಮುಖದಲ್ಲೂ ಕಣ್ಣು, ಮೂಗು, ಕಿವಿ ಎಲ್ಲವೂ ಸರಿಯಾಗಿ ಬೆಳೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement