ವಾಸವಿ ಜಯಂತ್ಯುತ್ಸವ: ಮೆರವಣಿಗೆ
ಕ.ಪ್ರ.ವಾರ್ತೆ , ಮಾಗಡಿ , ಮೇ 20
ವಾಸವಿ ದೇವಿಯ ಆರಾಧನೆಯಿಂದ ಮಾನಸಿಕ ನೆಮ್ಮದಿ ಜತೆಗೆ ಜೀವನೋಲ್ಲಾಸಕ್ಕೆ ನಾಂದಿಯಾಗಲಿದೆ ಎಂದು ಕೆಪಿಸಿಸಿ ಸದಸ್ಯ ಎ.ಮಂಜು ತಿಳಿಸಿದರು.
ಅವರು ಪಟ್ಟಣದಲ್ಲಿ ಆರ್ಯವೈಶ್ಯ ಮಂಡಲಿ ಏರ್ಪಡಿಸಿದ್ದ ವಾಸವಿ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಮಾತನಾಡುತ್ತಾ, ದೇವಾಲಯಗಳು ನೆಮ್ಮದಿಯ ತಾಣಗಳು. ಆರ್ಯವೈಶ್ಯ ಸಮಾಜ ಆರಾಧ್ಯ ದೇವಿ ವಾಸವಿ ಮಾತೆಗೆ ವಿಶೇಷವಾಗಿ ಅರ್ಪಣಾ ಮನೋಭಾವದಿಂದ ಹೋಮ, ಹವನ ಪೂರ್ಣಾಹುತಿ, ವಿಶೇಷ ಪೂಜೆ ಸಲ್ಲಿಸಿ ಆರಾಧಿಸುತ್ತಾರೆ. ಇದರಿಂದಲೇ ಅವರ ಜೀವನ ದಿನೇ ದಿನೆ ವೃದ್ಧಿಸುತ್ತದೆ. ವರ್ಷಕ್ಕೊಮ್ಮೆ ಶ್ರದ್ಧಾಭಕ್ತಿಯಿಂದ ದೇವಿಯ ಆರಾಧನೆ ಮಾಡುವುದರಿಂದ ಮಾನಸಿಕವಾಗಿ ಪ್ರವರ್ಧಿಸುತ್ತೇವೆ. ಸುಖ, ಶಾಂತಿ ಲಭಿಸುತ್ತದೆ ಎಂದರು.
ಆರ್ಯವೈಶ್ಯ ಮಂಡಲಿ ಅಧ್ಯಕ್ಷ ಎಸ್.ಎನ್.ನಟರಾಜು ಮಾತನಾಡಿ, ದೇವಿಯ ಆರಾಧನೆಯೇ ನಮ್ಮ ಬದುಕಿಗೆ ದಾರಿ ದೀಪ, ದೇವಿಯ ಆಶೀರ್ವಾದಿಂದ ಜೀವನ ಪಾವನವಾಗಿದೆ ಎಂದರು.
ವಾಸವಿ ಜಯಂತಿ ಪ್ರಯುಕ್ತ ದೇವಿಗೆ ವಿಶೇಷ ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು. ಸಂಜೆ ಮಂಗಳವಾದ್ಯದೊಂದಿಗೆ ವಾಸವಿ ಅಮ್ಮನವರ ರಾಜಬೀದಿ ಮೆರವಣಿಗೆ ನಡೆಯಿತು. ಇದಕ್ಕೂ ಮುನ್ನ ವಾಸವಿ ಮಾತೆಯನ್ನು ಮಹಿಳೆಯರು ಉಯ್ಯಾಲೆಯಲ್ಲಿ ತೂಗುವ ಮೂಲಕ ಹಾಡಿಸಿದರು.
ಪುರಸಭಾ ಸದಸ್ಯರಾದ ಎಂ.ಎನ್. ಮಂಜುನಾಥ್, ಕೆ.ವಿ. ಬಾಲು, ಬಿ.ಎನ್. ರಾಜು, ರಮೇಶ್, ವಿಜಯನಾಗೇಶ್, ಬಾಬು, ಎಸ್.ಜಿ. ರಮೇಶ್ ಗುಪ್ತಾ, ವೆಂಕಟಾಚಲಪತಿ, ಚಂದ್ರಶೇಖರ್, ರಘು, ಬಾಬು, ವಿನಯ್, ಶಂಕರ್, ಸುರೇಶ್, ಸುಂದರ, ರಾಜಣ್ಣ, ಮುರಳಿ, ಎಸ್.ಸುನೀಲ್, ದೀಪು, ವಾಸವಿ ಯುವ ಜನಸಂಘ, ರಾಘವೇಂದ್ರ ಸಮಿತಿ, ಮಹಿಳಾ ಮಂಡಲಿ, ವನಿತಾ ವೃಂದದ ಪದಾಧಿಕಾರಿಗಳು ಸೇರಿದಂತೆ ಕುಲಬಾಂಧವರು ಭಾಗವಹಿಸಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿ ಪುನೀತರಾದರು.