ಸೂಲಿಬೆಲೆಯಲ್ಲಿ ಮಳೆ, ತಂಪಾದ ಇಳೆ
ಸೂಲಿಬೆಲೆ: ಸೂಲಿಬೆಲೆ ಸುತ್ತಮುತ್ತ ಸೋಮವಾರ ಸಂಜೆ ಜೋರಾದ ಮಳೆಸುರಿದಿದ್ದು, ಕೆಲ ದಿನಗಳಿಂದ ಬೇಸಿಗೆ ಬಿಸಿಗೆ ಕಾದಿದ್ದ ಇಳೆಗೆ ತಂಪಾಯಿತು.
ಕಳೆದ ಕೆಲ ತಿಂಗಳಿಂದ ಬೇಸಿಗೆ ಬಿಸಿ ತಟ್ಟಿ ಜನ ಹೈರಾಣಾಗಿದ್ದರು. ಪ್ರತಿ ದಿನ ಮಳೆ ಬರುವ ಮುನ್ನೂಚನೆ ಆಕಾಶದಲ್ಲಿ ಕಾಣಿಸಿಕೊಂಡರೆ ಮಳೆ ಮಾತ್ರ ಬಾರದೆ ರೈತರಿಗೆ ನಿರಾಸೆಯನ್ನುಂಟು ಮಾಡುತ್ತಿತ್ತು. ಸೋಮವಾರ ಸಂಜೆ ಕಪ್ಪನೆಯ ಮೋಡಗಳಿಂದ ಸಂಜೆ 5.40 ರಲ್ಲಿ ಪ್ರಾರಂಭವಾದ ಮಳೆ ರಾತ್ರಿ 7 ಗಂಟೆಯಾದರೂ ಧಾರಾಕಾರವಾಗಿ ಸುರಿಯುತ್ತಲೇ ಇತ್ತು. ಇನ್ನೇನು ಕೃಷಿ ಚಟುವಟಿಕೆಗಳನ್ನು ಮಾಡಿಕೊಳ್ಳುವ ತವಕದಲ್ಲಿದ್ದ
ರೈತರ ಮೊಗದಲ್ಲಿ ಮಳೆ ಸಂತಸವನ್ನು ನೀಡಿದರೆ ಬಿಸಿ ತಾಪ ಮಳೆಯಿಂದ ಕಡಿಮೆಯಾಯಿತಲ್ಲ ಎಂದು ನಿಟ್ಟುಸಿರು ಬಿಟ್ಟರು. ಗುಡಗು ಮತ್ತು ಮಿಂಚಿನಿಂದ ಕೂಡಿದ ಮಳೆ ಇಳೆಗೆ ತಂಪಾದ ಅನುಭವ ನೀಡಿತು.