ಪಿರಮಿಡ್ ವ್ಯಾಲಿಯಲ್ಲಿ 4 ದಿನಗಳ ಬುದ್ಧ ಪೂರ್ಣಿಮಾ
ಕನಕಪುರ: ತಾಲೂಕು ಕೆಬ್ಬೆದೊಡ್ಡಿ ಗ್ರಾಮದಲ್ಲಿರುವ ಪಿರಮಿಡ್ ವ್ಯಾಲಿ ಇಂಟರ್‌ನ್ಯಾಷನಲ್ ಆವರಣದಲ್ಲಿ ದಶಮಾನೋತ್ಸವದ ಅಂಗವಾಗಿ ಮೇ23ರಿಂದ 26ರವರೆಗೆ ನಾಲ್ಕು ದಿನಗಳ ಬುದ್ಧಪೂರ್ಣಿಮಾ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಪ್ರತಿ ದಿನ ಪ್ರಾತಃಕಾಲ 5 ಗಂಟೆಗೆ ಬ್ರರ್ಹರ್ಷಿ ಸುಭಾಷ್ ಪತ್ರೀಜಿ ನೇತೃತ್ವದಲ್ಲಿ ಸಂಗೀತ ಧ್ಯಾನ, ಮಧ್ಯಾಹ್ನ 11 ಗಂಟೆಗೆ ಹಾಗೂ ಸಂಜೆ 3 ಗಂಟೆಗೆ ಆಧ್ಯಾತ್ಮಿಕ ತಜ್ಞರಿಂದ ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಆಧ್ಯಾತ್ಮಿಕ ಉಪನ್ಯಾಸಗಳು, ಸಂಜೆ 6 ಗಂಟೆಗೆ ಹೆಸರಾಂತ ಚಿಂತಕರಿಂದ ಆಧ್ಯಾತ್ಮಿಕ ಸಂದೇಶಗಳು, ರಾತ್ರಿ 8 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬುದ್ಧಪೂರ್ಣಿಮೆಯಂದು ರಾತ್ರಿ 9-30 ರಿಂದ 12-30 ರವರೆಗೆ ಅಖಂಡ ಹುಣ್ಣಿಮೆ ಧ್ಯಾನ ಕಾರ್ಯಕ್ರಮಗಳು ನಡೆಯುತ್ತವೆ ಎಂದು ವ್ಯವಸ್ಥಾಪಕ ಕೆಬ್ಬೆದೊಡ್ಡಿ ನಾಗರಾಜ್ ತಿಳಿಸಿದ್ದಾರೆ.