ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸೃಷ್ಟಿ ಟ್ರಸ್ಟ್‌ನ ಬೇಸಿಗೆ ಶಿಬಿರ ಸಮಾರೋಪ

Vishwanath S
Updated On : 24 May 2013, 12:36 pm

ದೊಡ್ಡಬಳ್ಳಾಪುರ: ಇಲ್ಲಿನ ಸೃಷ್ಟಿ ಟ್ರಸ್ಟ್ ನೇತೃತ್ವದಲ್ಲಿ ನಡೆದ 15 ದಿನಗಳ 2ನೇ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ಇಲ್ಲಿನ ಇಂಡಿಯಾ ಪ್ಯಾಕೇಜಸ್ ಲಿಮಿಟೆಡ್‌ನ ಹಿರಿಯ ಕಾರ್ಮಿಕ ವಿ.ಸುದರ್ಶನ್ ಅವರಿಗೆ ಕಾರ್ಮಿಕ ದಿನಾಚರಣೆ ಅಂಗವಾಗಿ ಸೃಷ್ಟಿ ಆದರ್ಶ ಕಾರ್ಮಿಕ ರತ್ನ ಪ್ರಶಸ್ತಿ-2013 ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಮಾತನಾಡಿ ಬೇಸಿಗೆ ಶಿಬಿರಗಳು ಕೇವಲ ಕಾಲಕಳೆಯುವ ವೇದಿಕೆಗಳಾಗದೆ ಮಕ್ಕಳ ಮನೋವಿಕಾಸ ಮತ್ತು ಇಂದಿನ ಸ್ಪರ್ಧಾ ಜಗತ್ತಿಗೆ ಪೂರಕವಾದ ಚಿಂತನಕ್ರಮವನ್ನು ಬೆಳೆಸಬೇಕು. ಸೃಜನಶೀಲ ಕಲೆ, ಸಾಹಿತ್ಯ, ಸಾಂಸ್ಕೃತಿಕ ವಿಚಾರಗಳತ್ತ ಮಕ್ಕಳನ್ನು ಸೆಳೆಯುವ ವೇದಿಕೆಗಳಾಗಬೇಕು ಎಂದರು.ಕಾರ್ಯಕ್ರಮದಲ್ಲಿ ಸೃಷ್ಟಿ ಟ್ರಸ್ಟ್ ಅಧ್ಯಕ್ಷ ಎಚ್.ವಿ.ಪ್ರಕಾಶ್, ತಾ.ಕಸಾಪ ಅಧ್ಯಕ್ಷ ಕೆ.ಆರ್.ರವಿಕಿರಣ್, ಟ್ರಸ್ಟ್‌ನ ಉಪಾಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಎನ್.ಜಾನಕಿ ಮಹೇಶ್, ಖಚಾಂಚಿ ಮಹೇಶ್, ಟ್ರಸ್ಟಿ ಶಿವಕುಮಾರ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement