ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆರೋಪಿಗಳ ಬಂಧನಕ್ಕೆ ಒತ್ತಾಯ

Vishwanath S
Updated On : 24 May 2013, 11:43 am

ಕ.ಪ್ರ.ವಾರ್ತೆ, ಸೂಲಿಬೆಲೆ , ಮೇ 24
ಇಲ್ಲಿಗೆ ಸಮೀಪದ ಅತ್ತಿಬೆಲೆ ಗ್ರಾಮದಲ್ಲಿ ಗುರುವಾರ ರಾತ್ರಿ ಕೆಲ ರೈತರ ತೋಟಗಳಲ್ಲಿ ಕೇಬಲ್ ವೈರ್ ಹಾಗೂ ಪ್ಯಾನಲ್ ಬೋರ್ಡಗಳು ಕಳವಾಗಿದ್ದು, ಇದಕ್ಕೆ ಕಾರಣವಾದ ಆರೋಪಿಗಳನ್ನು ಬಂಧಿಸಬೇಕು.
ಇದು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಾಗಿ ನಡೆದಿರುವ ಕೃತ್ಯ ಎಂದು ಆರೋಪಿಸಿ ಅತ್ತಿಬೆಲೆ ಗ್ರಾಮದ ರೈತರು ರಾ.ಹೆ.207 ರಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ ಘಟನೆ ಶುಕ್ರವಾರ ನಡೆದಿದೆ.
ಈ ಘಟನೆಯಿಂದ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿ ಪ್ರಯಾಣಿಕರು ಪರದಾಡುವಂತಾಯಿತು.  
ಆಗಿದ್ದೇನು: ಅತ್ತಿಬೆಲೆ ಗ್ರಾಮದ ಕೆಲ ರೈತರ ತೋಟಗಳಲ್ಲಿ ಯಾರೋ ದುಷ್ಕರ್ಮಿಗಳು ತಮ್ಮ ಕೈ ಚಳಕ ತೋರಿಸಿ ಅಪಾರ ಪ್ರಮಾಣದ ಕೇಬಲ್ ವೈರ್ ಹಾಗೂ ಪ್ಯಾನಲ್ ಬೋರ್ಡುಗಳು ಮತ್ತು ಮೋಟಾರ್ ಅನ್ನು ಕಳವು ಮಾಡಿಕೊಂಡು ಹೋಗಿದ್ದರು. ವಿಷಯ ತಿಳಿದು ಗ್ರಾಮಸ್ಥರು ಹೋಗಿ ನೋಡಲಾಗಿ ಅಕ್ಕಪಕ್ಕದಲ್ಲಿರುವ ಕೆಲವರ ತೋಟಗಳನ್ನು ಬಿಟ್ಟು ಉದ್ದೇಶಪೂರ್ವಕವಾಗಿ ಕೆಲವರ ತೋಟಗಳಲ್ಲಿ ಮಾತ್ರ  ಈ ಕೃತ್ಯ ನಡೆದಿರುವುದನ್ನು ಅರಿತು ಇಂದೊಂದು ರಾಜಕೀಯ ಪ್ರೇರಿತವಾಗಿ ದ್ವೇಷದಿಂದ ನಡೆಸಲಾಗಿದೆ ಎಂದು ಆರೋಪಿಸಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ರಾ.ಹೆ.207 ಹೊಸಕೋಟೆ, ಸೂಲಿಬೆಲೆ ಮಾರ್ಗದ ಹೆದ್ದಾರಿಗೆ ಅಡ್ಡಲಾಗಿ ಟೈರುಗಳನ್ನು ಹಾಕಿ ಬೆಂಕಿ ಹಚ್ಚಿದರು. ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದರು.
 ಆರೋಪಿಗಳು ಮತ್ತು ರಾಷ್ಟ್ರೀಯ ಪಕ್ಷವೊಂದರ ನಾಯಕನ ವಿರುದ್ಧ ಘೋಷಣಿಗಳನ್ನು ಕೂಗಿ ಘಟನೆಗೆ ರಾಜಕೀಯ ಪ್ರೇರಣೆ ಕಾರಣ ಎಂದು ಆರೋಪಿಸಿದರು.
ಹೆದ್ದಾರಿ ತಡೆಯಿಂದ ಹೊಸಕೋಟೆಯಿಂದ ಸೂಲಿಬೆಲೆ ಮಾರ್ಗವಾಗಿ ದೇವನಹಳ್ಳಿಗೆ ಸಂಚರಿಸುವ ವಾಹನಗಳು ಕಿ.ಮಿಗಟ್ಟಲೇ ಸಾಲು ಗಟ್ಟಿ ನಿಂತಿದ್ದವು. ಪ್ರತಿಭಟನೆ ವೇಳೆ ಸಂಚಾರದ ತೊಂದರೆಯಿಂದ ಪ್ರಯಾಣಿಕರು ಇಳಿದು ನಡೆದು ಹೋಗುತ್ತಿದ್ದ ದೃಶ್ಯಗಳು ಕಂಡುಬಂದವು. ವಿಷಯ ತಿಳಿದು ಘಟನೆ ಸ್ಥಳಕ್ಕೆ ಧಾವಿಸಿದ ಸೂಲಿಬೆಲೆ ಪೊಲೀಸ್ ಠಾಣೆ ಪಿಎಸ್‌ಐ ನದಾಫ್ ಪ್ರತಿಭಟನೆಕಾರರ ಮನವೊಲಿಸಿ ಆರೋಪಿಗಳು ಯಾವುದೇ ಪಕ್ಷಕ್ಕೆ ಸೇರಿರಲಿ ಹಾಗೂ ತಪ್ಪಿತಸ್ಥರು ಯಾರೇ ಆಗಲಿ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ಕೈಬಿಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement