ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಇಂದು ಪ್ರಾಣೇಶ ತಂಡದಿಂದ ನಗೆ ಹಬ್ಬ

Vishwanath S
Updated On : 24 May 2013, 11:41 am

ರಾಮನಗರ: ಕರ್ನಾಟಕ ಕಲಾ ಪರಿಷತ್‌ನಿಂದ ಚನ್ನಪಟ್ಟಣದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಮೇ 25ರ ಸಂಜೆ 6ಕ್ಕೆ ದಿವಂಗತ ಡಾ.ಪಿ.ಬಿ.ಶ್ರೀನಿವಾಸ್ ವೇದಿಕೆಯಲ್ಲಿ ಹಾಸ್ಯ ಚಕ್ರವರ್ತಿ ಗಂಗಾವತಿ ಪ್ರಾಣೇಶ ಹಾಗೂ ತಂಡದಿಂದ ನಗೆ ಹಬ್ಬ ಮತ್ತು ಡಾ.ಪಿ.ಬಿ. ಶ್ರೀನಿವಾಸ್ ಹಾಡಿರುವ ಜನಪ್ರಿಯ ಗೀತೆಗಳ ರಸ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.  ಕಾರ್ಯಕ್ರಮದಲ್ಲಿ ವಿಶ್ವದರ್ಶಿನಿ ಸೇವಾ ಸಂಸ್ಥೆಯ ಉದ್ಘಾಟನೆ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು. ಕಾರ್ಯಕ್ರಮದ ಪ್ರವೇಶ ದರ ರು.50 ಆಗಿದ್ದು, ಟಿಕೆಟ್‌ಗಾಗಿ ರಮ್ಯ ದರ್ಶಿನಿ ಹೋಟೆಲ್, ಭೂಮಿಕ ಹೋಂ ಅಪ್ಲೆಯೆನ್ಸಸ್, ಪೇಪರ್ ರಂಗ ಇಲ್ಲಿ ದೊರೆಯಲಿವೆ. ಟಿಕೆಟ್ ಮಾರಾಟದಿಂದ ಬಂದ ಹಣದಲ್ಲಿ ಅಸಂಘಟಿತ ಕಲಾವಿದರು ಹಾಗೂ ವೃದ್ಧರಿಗೆ ನೆರವು ನೀಡಲಾಗುವುದು ಎಂದು ಪ್ರಿಯಾ ಮೆಲೋಡಿಸ್‌ವ್ಯವಸ್ಥಾಪಕ ಮೊಗಳ್ಳಿ ರಮೇಶ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement