ದೇವನಹಳ್ಳಿಯಲ್ಲಿ ಇಂದು ಕರಗ
ದೇವನಹಳ್ಳಿ: ಇಲ್ಲಿನ ಮರಳುಬಾಗಿಲು ರಸ್ತೆಯಲ್ಲಿರುವ ಶ್ರೀ ಮೌಕ್ತಿಕಾಂಭ ಅಮ್ಮನವರ ಕರಗ ಮಹೋತ್ಸವ (ಶಕ್ತ್ಯುತ್ಸವ) ಶನಿವಾರ ರಾತ್ರಿ ಒಂದು ಗಂಟೆಗೆ ನಡೆಯಲಿದೆ ಎಂದು ದೇವಾಲಯದ ಮೌಕ್ತಿಕಾಂಭ ವಹ್ನಿಕುಲ ಕ್ಷತ್ರೀಯ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.
ಭಾನುವಾರ ಸಂಜೆ 4 ಗಂಟೆಗ ವಸಂತೋತ್ಸವ ಹಾಗೂ ಸೋಮವಾರ ಪಣಸ್ತರ ಪೂಜಾಕಾರ್ಯಗಳು ನಡೆಯಲಿವೆ.
ಕರಗಮಹೋತ್ಸವ ಅಂಗವಾಗಿ ಮೌಕ್ತಿಕಾಂಭ ದೇವಿಯವರು ಪಲ್ಲ್ಕಕಿ ಉತ್ಸವ ಹಾಗೂ ಶ್ರೀ ವೇಣುಗೋಪಾಲಸ್ವಾಮಿ, ಮಾರ್ಕೆಟ್ ಆಂಜನೇಯಸ್ವಾಮಿ, ಮರಳುಬಾಗಿಲು ಮುನೇಶ್ವರಸ್ವಾಮಿ, ದೊಡ್ಡಮ್ಮ ದೇವಿ, ದೇಶದ ಪೇಟೆ ಗಂಗಾಪರಮೇಶ್ವರಿ ದೇವರುಗಳ ಪಲ್ಲಕ್ಕಿ ಉತ್ಸವಗಳನ್ನು ಆಯೋಜಿಸಲಾಗಿವೆ.
ಹಳೇ ಪುರಸಭೆ ಮುಂಭಾಗದಲ್ಲಿ ಶ್ರೀ ಶಾರದಾಂಬ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದವರಿಂದ ಕುರುಕ್ಷೇತ್ರ ನಾಟಕ ಪ್ರದರ್ಶನ, ಹಳೇ ಬಸ್ ನಿಲ್ದಾಣದ ಮೈದಾನದಲ್ಲಿ ವಿನಾಯಕ ಕೃಪಾ ಪೋಷಿತ ನಾಟಕ ಮಂಡಳಿಯವರಿಂದ ಸರ್ಪವಾಂಛನ ಪರಾಭವ ನಾಟಕ ಪ್ರದರ್ಶನ ಸಹ ಆಯೋಜಿಸಲಾಗಿದೆ