3ನೇ ವರ್ಷವೂ ಶೇಕಡ 100ರಷ್ಟು ಫಲಿತಾಂಶ
ರಾಮನಗರ: ಸಿಬಿಎಸ್ಇ ಪಠ್ಯಕ್ರಮದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಗರದ ಎಂಎಚ್ಎನ್ಪಿಇ ಶಾಲೆಗೆ ಸತತ 3ನೇ ವರ್ಷವೂ ಶೇಕಡ 100ರಷ್ಟು ಫಲಿತಾಂಶ ಲಭಿಸಿದೆ. ಶಾಲೆಯ ವಿಜಯ್ ಶೇಕಡ 95ರಷ್ಟು ಅಂಕಗಳನ್ನು ಗಳಿಸಿದ್ದು, ಶಾಲೆಗೆ ಅಗ್ರಸ್ಥಾನಿಯಾಗಿದ್ದಾನೆ. 4 ವಿದ್ಯಾರ್ಥಿ ಶೇಕಡ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. 9 ವಿದ್ಯಾರ್ಥಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.