ಅಕ್ರಮ ಮರಳು; 5 ಲಾರಿ ಜಪ್ತಿ
ಸೂಲಿಬೆಲೆ: ಇಲ್ಲಿಗೆ ಸಮೀಪದ ನಂದಗುಡಿ ಪೊಲೀಸರು ಅಕ್ರಮ ಫಿಲ್ಟರ್ ಅಡ್ಡೆಗಳ ಮೇಲೆ ದಾಳಿ ಮಾಡಿ ಐದು ಲಾರಿಗಳನ್ನು ಜಪ್ತಿ ಮಾಡಿದ್ದಾರೆ. ಜಪ್ತಿಯಾದ ಲಾರಿಗಳನ್ನು ಹೊಸಕೋಟೆ ತಹಸೀಲ್ದಾರ್ ಅವರ ಸುರ್ಪದಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಂದಗುಡಿಗೆ ಸಮೀಪದ ಬೈಲುನರಸಾಪುರ ಗ್ರಾಮದಲ್ಲಿರುವ ಕೆರೆಯ ಅಂಗಳದಲ್ಲಿ ಫಿಲ್ಟರ್ ಮರಳು ತಯಾರಿಕೆ ಮಾಡುತ್ತಿರುವ ಬಗ್ಗೆ ಸಿಕ್ಕ ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಿದ ನಂದಗುಡಿ ಪಿಎಸ್ಐ ಪ್ರಕಾಶ ಮತ್ತು ಸಿಬ್ಬಂದಿ ಮರಳು ತುಂಬಿದ ಐದು ಲಾರಿಗಳನ್ನು ವಶಕ್ಕೆ ತೆಗೆದುಕೊಂಡು ತಹಸೀಲ್ದಾರ್ ಅವರ ಅಧೀನಕ್ಕೆ ನೀಡಲಾಗಿದ್ದು ಅವರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಳೆದ ಕೆಲ ತಿಂಗಳಿಂದ ಸ್ಥಗಿತವಾಗಿ ಅಕ್ರಮ ಪಿಲ್ಟರ್ ಮರಳು ತಯಾರಿಕೆ ದಂಧೆ ಚುನಾವಣೆ ಮುಗಿದ ಮೇಲೆ ಶುರುವಾಗಿದ್ದು, ಪೊಲೀಸರು ಇದರ ನಿಯಂತ್ರಣಕ್ಕೆ ಹದ್ದಿನ ಕಣ್ಣಿಟ್ಟಿದ್ದಾರೆ. ತಾಲೂಕು ಮತ್ತು ಜಿಲ್ಲಾಡಳಿತ ಇದರ ಸಂಪೂರ್ಣ ನಿಯಂತ್ರಣಕ್ಕೆ ಸತತ ದಾಳಿಗಳನ್ನು ನಡೆಸುತ್ತಿದ್ದರು ಪಿಲ್ಟರ್ ದಂಧೆಕೋರರು ಪೊಲೀಸರ ಕಣ್ಣು ತಪ್ಪಿಸಿ ಮರಳು ಸಾಗಟ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.