ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆನೆ ತುಳಿದು ವ್ಯಕ್ತಿಗೆ ಗಾಯ, ಪ್ರತಿಭಟನೆ

Rashmi Kasaragodu
Updated On : 28 May 2013, 1:06 am

ಕ.ಪ್ರ. ವಾರ್ತೆ ಟಿ ಕನಕಪುರ ಟಿ ಮೇ 27
ಗ್ರಾಮದೊಳಗೆ ನುಗ್ಗಿದ ಆನೆಯೊಂದನ್ನು ಓಡಿಸಲು ಹೋದ ಗ್ರಾಮಸ್ಥರಲ್ಲಿ ಒಬ್ಬನನ್ನು ಆನೆಯು ತುಳಿದು ಗಾಯಗೊಳಿಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆತಡೆ ನಡೆಸಿ ಪ್ರತಿಭಟಿಸಿದ ಘಟನೆ ಹಾರೋಹಳ್ಳಿ ಜಿಗಣಿ ಮುಖ್ಯರಸ್ತೆಯ ಕಣಿವೆ ಮಾದಾಪುರ ಗ್ರಾಮದಲ್ಲಿ ನಡೆದಿದೆ. ಆನೆಯ ತುಳಿತಕ್ಕೀಡಾದ ವ್ಯಕ್ತಿಯನ್ನು ತಮಿಳುನಾಡು ಮೂಲದ ಭಾಗ್ಯರಾಜಿ (34) ಎಂದು ತಿಳಿದುಬಂದಿದ್ದು ತೀವ್ರವಾಗಿ ಗಾಯಗೊಂಡಿರುವ ಈತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬನ್ನೇರುಘಟ್ಟ ಅರಣ್ಯಪ್ರದೇಶಕ್ಕೆ ಹೊಂದಿಕೊಂಡಿರುವ ಈ ಭಾಗದಲ್ಲಿ ಆನೆಗಳ ಉಪಟಳ ಸರ್ವೇಸಾಮಾನ್ಯವಾಗಿದ್ದು ಕಳೆದ ಒಂದು ತಿಂಗಳಿನಿಂದ ಒಂಟಿ ಆನೆಯ ಉಪಟಳವನ್ನು ನಿಯಂತ್ರಿಸಲು ಅರಣ್ಯ ಇಲಾಖೆಗೆ ಹತ್ತಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಾಗಲೇ ಗ್ರಾಮದಲ್ಲಿ ಆನೆಗಳ ದಾಳಿಗೆ ಸಿಲುಕಿ ಇಬ್ದರು ಮೃತರಾಗಿದ್ದಾರೆ. ನಾಲ್ಕು ಮಂದಿ ಅಂಗವಿಕಲರಾಗಿ ಜೀವಿಸುತ್ತಿದ್ದಾರೆ. ಇಲಾಖೆಯ ನಿರ್ಲಕ್ಷ್ಯದಿಂದ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಬೇಕಾಗಿದೆ ಎಂದು ಪ್ರತಿಭಟನಾ ನಿರತ ಗ್ರಾಮಸ್ಥರು ಆರೋಪಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement