ಎಂಎಸ್ವಿ ಶಾಲೆಗೆ ಶೇ.100 ಫಲಿತಾಂಶ
ದೊಡ್ಡಬಳ್ಳಾಪುರ: ಇಲ್ಲಿನ ಎಂಎಸ್ವಿ ಪಬ್ಲಿಕ್ ಶಾಲೆಗೆ 2012-13ನೇ ಸಾಲಿನ ಕೇಂದ್ರೀಯ ಪಠ್ಯಕ್ರಮ (ಸಿಬಿಎಸ್ಇ)ದ ಹತ್ತನೇ ತರಗತಿ ಪರೀಕ್ಷೆಗಳಲ್ಲಿ ಶೇ.100 ಫಲಿತಾಂಶ ಲಭ್ಯವಾಗಿದೆ. ಶಾಲೆಯಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ ಎಲ್ಲ 11 ಮಂದಿಯೂ ಉತ್ತೀರ್ಣರಾಗಿದ್ದು, ಅದರಲ್ಲಿ 9 ಮಂದಿ ಉನ್ನತ ಶ್ರೇಣಿ ಪಡೆದಿದ್ದಾರೆ. ಶಾಲೆಯ ವಿದ್ಯಾರ್ಥಿಗಳಾದ ಆರ್.ಶಶಾಂಕ್, ಬಿ.ಎನ್. ಗಿರಿಧರ್ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಲಿ ಮತ್ತು ಬೋಧಕ ವರ್ಗ ಅಭಿನಂದಿಸಿದೆ.
3ನೇ ವರ್ಷವೂ ಶೇಕಡ 100ರಷ್ಟು ಫಲಿತಾಂಶ
ರಾಮನಗರ: ಸಿಬಿಎಸ್ಸಿ ಪಠ್ಯಕ್ರಮದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಗರದ ಎಂಎಚ್ಎನ್ಪಿಇ ಶಾಲೆಗೆ ಸತತ 3ನೇ ವರ್ಷವೂ ಶೇಕಡ 100ರಷ್ಟು ಫಲಿತಾಂಶ ಲಭಿಸಿದೆ. ಶಾಲೆಯ ವಿಜಯ್ ಶೇಕಡ 95ರಷ್ಟು ಅಂಕಗಳನ್ನು ಗಳಿಸಿದ್ದು, ಶಾಲೆಗೆ ಅಗ್ರಸ್ಥಾನಿಯಾಗಿದ್ದಾನೆ. 4 ವಿದ್ಯಾರ್ಥಿ ಶೇಕಡ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. 9 ವಿದ್ಯಾರ್ಥಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.