ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಎಸ್ಡಿಪಿಐ ಕಾರ್ಯಕರ್ತರ ಪ್ರತಿಭಟನೆ

Rashmi Kasaragodu
Updated On : 28 May 2013, 12:24 pm

ಕ.ಪ್ರ. ವಾರ್ತೆ ಟಿ ರಾಮನಗರ ಟಿ ಮೇ 27
ಉತ್ತರ ಪ್ರದೇಶದ ಫೈಜಾಬಾದ್ದಲ್ಲಿ ಬಂಧಿತ ಆರೋಪಿ ಖಾಲಿದ್ ಮುಜಾಹಿದ್ ಸಾವು ಹಾಗೂ ಆತನ ಪರ ವಕೀಲ ಮಹಮದ್ ಶಕೀಲ್ ಮೇಲಿನ ದಾಳಿ ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ಡಿಪಿಐ) ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ ಎಸ್ಡಿಪಿಐ ಕಾರ್ಯಕರ್ತರು ಕೇಂದ್ರ ಸರ್ಕಾರ, ಗೃಹ ಸಚಿವಾಲಯ ಮತ್ತು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಿದರು.
ಭಯೋತ್ಪಾದನೆ ಪ್ರಕರಣದಲ್ಲಿ ಬಂಧಿತನಾಗಿದ್ದ 30ರ ಪ್ರಾಯದ ಆರೋಪಿಯಾದ ಖಾಲಿದ್ ಮುಜಾಹಿದ್ ಸಹಜ ಸಾವನ್ನಪ್ಪಿದ್ದಾನೆ ಎಂಬ ಪೊಲೀಸರ್ ಹೇಳಿಕೆ ನಂಬಿಕೆಗೆ ಅರ್ಹವಲ್ಲ. ಮೃತ ದೇಹದ ಮೇಲಿದ್ದ ಗಾಯದ ಗುರುತು, ರಕ್ತ ಹೆಪ್ಪುಗಟ್ಟಿದ್ದ ಗುರುತನ್ನು ಗಮನಿಸಿದರೆ ಖಂಡಿತ ಅದೊಂದು ಲಾಕಪ್ ಡೆತ್ ಎಂದು ಪ್ರತಿಭಟನಾಕಾರರು ಆರೋಪಿಸಿದರು.  
ಭಯೋತ್ಪಾದನೆ ಆರೋಪದಡಿ ಬಂಧಿಸಲ್ಪಟ್ಟ ಆರೋಪಿಗಳ ಪರ ವಾದಿಸುವ ವಕೀಲರ ಮೇಲೆ ಹಲ್ಲೆ, ದಾಳಿ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅಂತೆಯೇ ಖಾಲಿದ್ ಮುಜಾಹಿದ್ ಪರ ವಕೀಲ ಮಹಮದ್ ಶಕೀಲ್ ಮೇಲಿನ ದಾಳಿಯೂ ಪೂರ್ವನಿಯೋಜಿತ ಎಂದು ಅವರು ಟೀಕಿಸಿದರು.  
ಖಾಲಿದ್ ಮುಜಾಹಿದ್ ಕುಟುಂಬಕ್ಕೆ ತಕ್ಷಣವೇ ಸರ್ಕಾರ ರು.50 ಲಕ್ಷ  ಪರಿಹಾರ ಮತ್ತು ಆತನ ಕುಟುಂಬದ ಸದಸ್ಯರಿಗೆ ಸರ್ಕಾರಿ ಹುದ್ದೆ ನೀಡಬೇಕು. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಹಮದ್ ಫಾರೂಕ್, ಪ್ರಧಾನ ಕಾರ್ಯದರ್ಶಿ ಫೈರೋಜ್ ಆಲಿಖಾನ್,  ವಕೀಲ ಚಾಂದ್ ಪಾಷಾ,  ಅಜೀಜ್ ಉಲ್ಲಾ ಷರೀಫ್, ಅಫ್ರೋಜ್ ಆಲಿ ಖಾನ್, ಸೈಯದ್ ನಿಸ್ಸಾರ್ ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement