ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಒಂದು ವರ್ಷದ ರಂಗ ಶಿಕ್ಷಣ ಡಿಪ್ಲೊಮಾಗೆ ಅರ್ಜಿ ಆಹ್ವಾನ

Rashmi Kasaragodu
Updated On : 28 May 2013, 12:27 pm

ರಾಮನಗರ: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೆಹಳ್ಳಿಯ ಶಿವಕುಮಾರ ರಂಗ ಪ್ರಯೋಗ ಶಾಲೆಯಿಂದ 2013-14ನೇ ಸಾಲಿನ ಒಂದು ವರ್ಷದ ರಂಗ ಶಿಕ್ಷಣ ಡಿಪ್ಲೊಮಾಗೆ ಅರ್ಜಿ ಆಹ್ವಾನಿಸಿದೆ. ಡಿಪ್ಲೊಮಾ ಅವಧಿಯು ಒಂದು ವರ್ಷವಾಗಿದ್ದು, ಕನಿಷ್ಠ ವಿದ್ಯಾರ್ಹತೆ ಎಸ್ಎಸ್ಎಲ್ಸಿ  ತೇರ್ಗಡೆಯಾಗಿರಬೇಕು. ತರಬೇತಿ ಅವಧಿಯಲ್ಲಿ ಊಟ, ವಸತಿ ವ್ಯವಸ್ಥೆ ನೀಡಲಾಗುತ್ತಿದೆ. ಭಾರತೀಯ ರಂಗ ಭೂಮಿ, ಕನ್ನಡ ರಂಗ ಭೂಮಿ ಮತ್ತು ಸಾಹಿತ್ಯ ಪರಂಪರೆ, ಪಾಶ್ಚಾತ್ಯ ರಂಗ ಭೂಮಿ, ಅಭಿನಯ, ಆಹಾರ್ಯ, ಶಿಕ್ಷಣ ರಂಗ ಭೂಮಿ ಕುರಿತಾತ ಸೈದ್ದಾಂತಿಕ ಮತ್ತು ಪ್ರಾಯೋಗಿಕ ತರಗತಿಗಳು ನಡೆಯುತ್ತವೆ. ಕಳರಿ, ಕತ್ತಕ್ಕಲಿ, ಯಕ್ಷಗಾನ, ವೀರಗಾಸೆ, ಪ್ರಸಾದನ, ಬೆಳಕಿನ ವಿನ್ಯಾಸ, ರಂಗ ವಿನ್ಯಾಸ, ವಸ್ತ್ರ ವಿನ್ಯಾಸ, ಕಾವ್ಯ, ಸಿನಿಮಾ, ಚಿತ್ರಕಲೆ, ಮುಂತಾದವುಗಳ ಕುರಿತು ಕಾರ್ಯಾಗಾರ ಹಾಗೂ ಕಮ್ಮಟಗಳು ನಡೆಯುವವು. ಆಸಕ್ತರು ಪ್ರಾಚಾರ್ಯರು, ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆ, ಸಾಣೆಹಳ್ಳಿ-577 515, ಹೊಸದುರ್ಗ ತಾಲೂಕು, ಚಿತ್ರದುರ್ಗ ಜಿಲ್ಲೆ, ಈ ವಿಳಾಸದಿಂದ ಅಂಚೆ ಮೂಲಕ ಪ್ರವೇಶ ಪತ್ರ ತರಿಸಿಕೊಳ್ಳಬಹುದು.  ಜುಲೈ 1 ಮತ್ತು 2 ಬೆಳಗ್ಗೆ 10ಕ್ಕೆ ರಂಗ ಪ್ರಯೋಗ ಶಾಲೆಯಲ್ಲಿ ಸಂದರ್ಶನವಿದ್ದು, ಮೊದಲ ದಿನ ಪ್ರಾಯೋಗಿಕ , 2ನೇ ದಿನ ಮೌಖಿಕ ಪರೀಕ್ಷೆಗಳನ್ನು ನಡೆಸಲಾಗುವುದು. ಹೆಚ್ಚಿನ ಮಾಹಿತಿಗೆ 08199243772 ಅಥವಾ 9481345450 ಸಂಪರ್ಕಿಸಬಹುದು.
'ಬುದ್ಧನ ತತ್ವಾದರ್ಶಗಳನ್ನು ಪಾಲಿಸಿ'
ರಾಮನಗರ: ಬುದ್ಧನ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ಸ್ವಾಸ್ತ್ಯ ಸಮಾಜ ನಿರ್ಮಾಣಕ್ಕೆ ಮುಂದಾಗುವಂತೆ ಗುಲ್ಬರ್ಗಾ ಕೇಂದ್ರ ವಿವಿ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ್ ಕರೆ ನೀಡಿದರು.   ನಗರದ ಹೊರ ವಲಯದ ಜಾನಪದ ಲೋಕದಲ್ಲಿ ಪ್ರಬುದ್ಧ ಬಳಗ ಸಂಘಟನೆಯಿಂದ ನಡೆದ ಬುದ್ಧ ಪ್ರಜ್ಞೆಯೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಸಂವಿಧಾನ ರಚಿಸುವಾಗ ಬುದ್ಧನ ಸಮಸಮಾಜ ಕನಸನ್ನು ಜಾರಿಗೊಳಿಸುವ ಪ್ರಯತ್ನ ನಡೆಸಿದ್ದಾರೆ ಎಂದರು.  ಸಮಾಜದಲ್ಲಿರುವ ಎಲ್ಲ ಸಮುದಾಯಗಳನ್ನು ಬೆಸೆಯುವ ಮೂಲಕ ಶಾಂತಿ ಸ್ಥಾಪನೆಗೆ ನಾವೀಗ ಮುಂದಾಗಬೇಕಿದೆ. ಎಲ್ಲ ವರ್ಗದಲ್ಲಿರುವ ಬಡವರು, ಶೋಷಿತರ ಏಳ್ಗೆಯೇ ನಮ್ಮೆಲ್ಲರ ಧ್ಯೇಯವಾಗಬೇಕು ಎಂದು ಅವರು ಸಲಹೆ ನೀಡಿದರು.   ಜಾನಪದ ವಿದ್ವಾಂಸ ಡಾ.ಕುರುವ ಬಸವರಾಜು ಮಾತನಾಡಿ, ಕನ್ನಡದ ವಚನ ಸಾಹಿತ್ಯದ ಮೇಲೆ ಬುದ್ಧನ  ತತ್ವಗಳ ನೆರಳಿರುವುದನ್ನು ಕಾಣಬಹುದು. ಬುದ್ಧನ ಸಂದೇಶಗಳು ಸಾರ್ವಕಾಲಿಕವಾದುವು ಎಂದು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement