ಒಂದು ವರ್ಷದ ರಂಗ ಶಿಕ್ಷಣ ಡಿಪ್ಲೊಮಾಗೆ ಅರ್ಜಿ ಆಹ್ವಾನ
ರಾಮನಗರ: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೆಹಳ್ಳಿಯ ಶಿವಕುಮಾರ ರಂಗ ಪ್ರಯೋಗ ಶಾಲೆಯಿಂದ 2013-14ನೇ ಸಾಲಿನ ಒಂದು ವರ್ಷದ ರಂಗ ಶಿಕ್ಷಣ ಡಿಪ್ಲೊಮಾಗೆ ಅರ್ಜಿ ಆಹ್ವಾನಿಸಿದೆ. ಡಿಪ್ಲೊಮಾ ಅವಧಿಯು ಒಂದು ವರ್ಷವಾಗಿದ್ದು, ಕನಿಷ್ಠ ವಿದ್ಯಾರ್ಹತೆ ಎಸ್ಎಸ್ಎಲ್ಸಿ ತೇರ್ಗಡೆಯಾಗಿರಬೇಕು. ತರಬೇತಿ ಅವಧಿಯಲ್ಲಿ ಊಟ, ವಸತಿ ವ್ಯವಸ್ಥೆ ನೀಡಲಾಗುತ್ತಿದೆ. ಭಾರತೀಯ ರಂಗ ಭೂಮಿ, ಕನ್ನಡ ರಂಗ ಭೂಮಿ ಮತ್ತು ಸಾಹಿತ್ಯ ಪರಂಪರೆ, ಪಾಶ್ಚಾತ್ಯ ರಂಗ ಭೂಮಿ, ಅಭಿನಯ, ಆಹಾರ್ಯ, ಶಿಕ್ಷಣ ರಂಗ ಭೂಮಿ ಕುರಿತಾತ ಸೈದ್ದಾಂತಿಕ ಮತ್ತು ಪ್ರಾಯೋಗಿಕ ತರಗತಿಗಳು ನಡೆಯುತ್ತವೆ. ಕಳರಿ, ಕತ್ತಕ್ಕಲಿ, ಯಕ್ಷಗಾನ, ವೀರಗಾಸೆ, ಪ್ರಸಾದನ, ಬೆಳಕಿನ ವಿನ್ಯಾಸ, ರಂಗ ವಿನ್ಯಾಸ, ವಸ್ತ್ರ ವಿನ್ಯಾಸ, ಕಾವ್ಯ, ಸಿನಿಮಾ, ಚಿತ್ರಕಲೆ, ಮುಂತಾದವುಗಳ ಕುರಿತು ಕಾರ್ಯಾಗಾರ ಹಾಗೂ ಕಮ್ಮಟಗಳು ನಡೆಯುವವು. ಆಸಕ್ತರು ಪ್ರಾಚಾರ್ಯರು, ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆ, ಸಾಣೆಹಳ್ಳಿ-577 515, ಹೊಸದುರ್ಗ ತಾಲೂಕು, ಚಿತ್ರದುರ್ಗ ಜಿಲ್ಲೆ, ಈ ವಿಳಾಸದಿಂದ ಅಂಚೆ ಮೂಲಕ ಪ್ರವೇಶ ಪತ್ರ ತರಿಸಿಕೊಳ್ಳಬಹುದು. ಜುಲೈ 1 ಮತ್ತು 2 ಬೆಳಗ್ಗೆ 10ಕ್ಕೆ ರಂಗ ಪ್ರಯೋಗ ಶಾಲೆಯಲ್ಲಿ ಸಂದರ್ಶನವಿದ್ದು, ಮೊದಲ ದಿನ ಪ್ರಾಯೋಗಿಕ , 2ನೇ ದಿನ ಮೌಖಿಕ ಪರೀಕ್ಷೆಗಳನ್ನು ನಡೆಸಲಾಗುವುದು. ಹೆಚ್ಚಿನ ಮಾಹಿತಿಗೆ 08199243772 ಅಥವಾ 9481345450 ಸಂಪರ್ಕಿಸಬಹುದು.