ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕರಳು ಬೇನೆಯಿಂದ ಕರಡಿ ಸಾವು

Rashmi Kasaragodu
Updated On : 28 May 2013, 1:07 am

ಆನೇಕಲ್ಲು: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕರಡಿ ಪುನರ್ವಸತಿ ಕೇಂದ್ರ(ಎಸ್‌ಒಎಸ್ ಸಂಸ್ಥೆ)ದಲ್ಲಿ ಆಶ್ರಯ ಪಡೆದಿದ್ದ ಕುಶ (7) ಸಾವನ್ನಪ್ಪಿದೆ. ಕರುಳು ಬೇನೆಯಿಂದ ನರಳುತ್ತಿದ್ದ ಕರಡಿಯನ್ನು 2007ರಲ್ಲಿ ಕನಕಪುರದ ಕಲಂದರ್‌ಗಳಿಂದ ವಶಪಡಿಸಿಕೊಳ್ಳಲಾಗಿತ್ತು ಎಂದು ಆಡಳಿತಾಧಿಕಾರಿ ದೇವರಾಜ್ ತಿಳಿಸಿದ್ದಾರೆ. ಉದ್ಯಾನವನ ಇತ್ತೀಚೆಗೆ ಸಾವಿನ ಮನೆಯಾಗಿದ್ದು ಬಿಳಿ ಹುಲಿ, ನಂತರ ಕರಡಿ ಸಾವಿನಿಂದಾಗಿ ಸೂತಕದ ಮನೆಯಾಗಿದೆ ಎಂದು ಪ್ರಾಣಿ ಪ್ರಿಯರು ಆತಂಕ ವ್ಯಕ್ತ ಪಡಿಸಿದ್ದಾರೆ. ಎಸ್‌ಒಎಸ್ ಸಂಸ್ಥೆ ದೇಶ ವಿದೇಶದಗಳಿಂದ ಅನುದಾನ ಪಡೆಯುತ್ತಿದ್ದು ಪ್ರಾಣಿಗಳ ಜತನದಲ್ಲಿ ಲೋಪವಿದ್ದು ತನಿಖೆಯಾಗಬೇಕೆಂದೂ ಪ್ರಾಣಿ ಪ್ರಿಯರ ಸಂಘ ಒತ್ತಾಯಿಸಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement