ನೃತ್ಯಗಾನ, ಪಿಬಿಎಸ್ಗೆ ಗಾನ ನಮನ
ಬೆಂಗಳೂರು: ಬಿಎಸ್ಎನ್ಎಲ್ ಪ್ರತಿಭಾ ಪ್ರೋತ್ಸಾಹ ಸಮಿತಿಯಿಂದ ರವೀಂದ್ರ ಕಲಾ ಕ್ಷೇತ್ರದಲ್ಲಿ ನೃತ್ಯಗಾನ ಸಂಭ್ರಮ, ಪಿ.ಬಿ. ಶ್ರೀನಿವಾಸ್ಗೆ ಗಾನ ನಮನ ಕಾರ್ಯಕ್ರಮ ನಡೆಯಿತು.
5 ದಿವಸದ ನೃತ್ಯಗಾನ ಸಂಭ್ರಮ ಕಾರ್ಯಕ್ರಮದಲ್ಲಿ 400 ಸ್ಪರ್ಧಿ ಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಬಹುಮಾನ ವಿತರಿಸಿದ ಬಿಎಸ್ಎನ್ಎಲ್ ಕರ್ನಾಟಕ ಸರ್ಕಲ್ನ ಮುಖ್ಯ ಮಹಾ ಪ್ರಬಂಧಕ ಆರ್.ಕೆ. ಮಿಶ್ರಾ ಮಾತನಾಡಿ, ಪ್ರತಿಭೆಯನ್ನು ನೋಡಿ ಪ್ರೋತ್ಸಾಹ ನೀಡುವುದು ಪ್ರಶಂಸನೀಯ. ಬಿಎಸ್ಎನ್ಎಲ್ ಆ ಮಹತ್ಕಾರ್ಯ ಮಾಡುತ್ತಿದೆ. ಇದು ವೇದಿಕೆಯ ಕಾರ್ಯಕ್ರಮವಾಗಿರಬಹುದು. ಆದರೆ ಇದರ ಹಿಂದೆ ಅನೇಕರ ಪ್ರಯತ್ನವಿದೆ. ಭಾಗವಹಿಸುವಿಕೆ ಪ್ರತಿಭೆಯ ಆರಂಭಿಕ ಹಂತ. ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಗಾಯಕ ರಾಜೇಶ್ ಕೃಷ್ಣನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.