ಹಳೆ ವೈಷಮ್ಯ: ಅಡ್ಡಗಟ್ಟಿ ವ್ಯಕ್ತಿ ಮೇಲೆ ಹಲ್ಲೆ
ಚನ್ನಪಟ್ಟಣ: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೆಲಸ ಮುಗಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಮಾರ್ಗಮಧ್ಯೆ ಅಡ್ಡಗಟ್ಟಿ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಅರೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಗಿರೀಶ (25) ಹಲ್ಲೆ ಗೀಡಾಗಿರುವ ವ್ಯಕ್ತಿಯಾಗಿದ್ದು ಇದೇ ಗ್ರಾಮದ ಸಾವಂದಯ್ಯ ಅವನ ಮಗ ಗಿರೀಶ ಮತ್ತು ಇತರ 6 ಮಂದಿ ಕೆಲಸ ಮುಗಿಸಿ ಕೊಂಡು ಹಿಂದಿರುಗುತ್ತಿದ್ದ ಗಿರೀಶನ ಕಣ್ಣಿಗೆ ಕಾರದಪುಡಿ ಎರಚಿ ಹಲ್ಲೆ ಮಾಡಿದ್ದಾರೆ.
ಈ ಸಂಬಂಧ ಎಂ.ಕೆ.ದೊಡ್ಡಿ ಠಾಣೆಯಲ್ಲಿ ದೂರು ದಾಖಲಾಗಿದ್ದು ಗಾಯಾಳು ಗಿರೀಶ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.