ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಡೆಂಘೀ ಮಹಾಮಾರಿಗೆ ಮಹಿಳೆ ಬಲಿ?

Rashmi Kasaragodu
Updated On : 29 May 2013, 12:34 pm

ಕ.ಪ್ರ.ವಾರ್ತೆ   ಚನ್ನಪಟ್ಟಣ್ಣ ಮೇ 28
ತಾಲೂಕಿಗೂ ಡೆಂಘೀ ಮಹಾಮಾರಿ ಕಾಲಿಸಿರಿದೆ. ತಾಲೂಕಿನ ಕೂಡ್ಲೂರು ಗ್ರಾಮದ ನಾಗರತ್ನಮ್ಮ (45)ಎಂಬುವರು ಡೆಂಘೀಗೆ ಮೊದಲ ಬಲಿಯಾಗಿದ್ದಾರೆ.
ಕಳೆದೊಂದು ವಾರದಿಂದ ಡೆಂಘೀ ಜ್ವರದಿಂದ ಬಳಲುತ್ತಿದ್ದ ನಾಗರತ್ನಮ್ಮ  ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು ಈ ಘಟನೆಯಿಂದಾಗಿ ತಾಲೂಕಿನ ಜನತೆಯನ್ನು ಡೆಂಘೀ ಭೀತಿ ಆವರಿಸದೆ. ತಾಲೂಕು ಆರೋಗ್ಯ ಇಲಾಖೆ ಡೆಂಘೀನಿಂದಾಗಿ ಯಾವುದೇ ಸಾವು ಸಂಭವಿಸುತ್ತಿಲ್ಲ ಎಂದು ಹೇಳುತ್ತಿರುವಾಗಲೇ  ನಾಗರತ್ನಮ್ಮ ಸಾವಿಗೀಡಾಗಿದ್ದು, ಆರೋಗ್ಯ ಇಲಾಖೆ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರಲ್ಲಿ ಗುಮಾನಿ ಮೂಡಿಸುವಂತಾಗಿದೆ.
ತಾಲೂಕಿನಲ್ಲಿ 11 ಪ್ರಕರಣ: ತಾಲೂಕಿನಾದ್ಯಂತ 11 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ಡೆಂಘೀ ಸೋಂಕು ಪೀಡಿತರಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ವಿವರಣೆ ನೀಡಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರನ್ನು ಬೆಂಗಳೂರಿನ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ. ತಾಲೂಕಿನ ಮುನಿಯಪ್ಪನ ದೊಡ್ಡಿ ಗ್ರಾಮದ ನಿತೀನ್ (9), ಹರ್ಷಿತ(6) ತೀವ್ರ ಸೋಂಕಿಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜ್ವರಕ್ಕೆ ತುತ್ತಾದವರು ಶಂಕಿತರ ರಕ್ತ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ಮಾಡಲಾಗುತ್ತಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಆರೋಗ್ಯ ಇಲಾಖೆ ವೈಫಲ್ಯ: ಗ್ರಾಮೀಣ ಪ್ರದೇಶದಲ್ಲಿ ಡೆಂಘೀ ಹೆಚ್ಚಾಗುತ್ತಿದ್ದು  ಡೆಂಘೀ ಜ್ವರ ತಡೆಗೆ ಮುಂಜಾಗೃತಾ ಕ್ರಮ ಕೈಗೊಳ್ಳುವಲ್ಲಿ ಆರೋಗ್ಯ ಇಲಾಖೆ ವಿಫಲಗೊಂಡಿದೆ ಎಂಬ ಆಪಾದನೆ ಸಾರ್ವಜನಿಕರದ್ದಾಗಿದೆ. ಡೆಂಘೀ ಸೋಂಕು ಕಂಡು ಬಂದ ಗ್ರಾಮಗಳಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಗ್ರಾಮಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ನೈರ್ಮಲ್ಯ ಕಾಪಾಡಲುಅಗತ್ಯವಿರುವ ಕ್ರಮವನ್ನು ಕೈಗೊಳ್ಳದಿರುವುದೇ ಡೆಂಘೀ ಜ್ವರ ಉಲ್ಬಣಗೊಳ್ಳಲು ಕಾರಣ ಎಂದು ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement