ನಾಗರತ್ನಮ್ಮ ಸಾವು ಡೆಂಘೀಯಿಂದಲ್ಲ: ಆರೋಗ್ಯಾಧಿಕಾರಿ ರಾಜು ಸ್ಪಷ್ಟನೆ
ಚನ್ನಪಟ್ಟಣ: ಕೂಡ್ಲೂರು ಗ್ರಾಮದ ನಾಗರತ್ನಮ್ಮ ಸಾವು ಡೆಂಘೀಯಿಂದ ಸಂಭವಿಸಿಲ್ಲ ಅದು ಥೈನೋಮಾ-ಥೊರಾಟಿಕ್ ಮೈಲಾಪತಿ ಎಂಬ ಕಾಯಿಲೆಯಿಂದ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರಾಜು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ನಾಲ್ಕು ತಿಂಗಳಿಂದ ನಾಗರತ್ನಮ್ಮ ಈ ರೋಗದಿಂದ ಬಳಲುತ್ತಿದ್ದರು. ಬೆಂಗಳೂರಿನ ಶೇಖರ್ ಆಸ್ಪತ್ರೆಯಲ್ಲಿ ಈ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದು ಈ ಕಾಯಿಲೆಯ ಕೊನೆಯ ಹಂತವಾಗಿ ಜ್ವರ ಮತ್ತು ವಾಂತಿ ಭೇದಿ ಕಾಣಿಸಿಕೊಳ್ಳುತ್ತದೆ. ಈ ಕಾರಣಕ್ಕಾಗಿ ಮೇ 24 ರಂದು ಅವರು ಆಸ್ಪತ್ರೆಗೆ ದಾಖಲಾಗಿದ್ದು ಅಲ್ಲಿನ ವೈದ್ಯರು ವಾಸಿಯಾಗುವುದಿಲ್ಲ ಎಂದು ಮನೆಗೆ ಕಳುಹಿಸಿದ್ದಾರೆ. ಇದನ್ನು ತಪ್ಪಾಗಿ ಡೆಂಘೀ ಎಂದು ಅರ್ಥೈಸಲಾಗಿದೆ ಎಂದಿದ್ದಾರೆ. ನಾಗರತ್ನಮ್ಮ ಎದೆಯ ಭಾಗದಲ್ಲಿ ಗೆಡ್ಡೆ ಇದ್ದು, ಇದು ಕ್ಯಾನ್ಸರ್ಗೆ ಸಂಬಂಧಿಸಿದ ಕಾಯಿಲೆಯಾಗಿದೆ ಎಂದು ತಿಳಿಸಿದ್ದಾರೆ.