ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬುದ್ಧ ಜನಸಾಮಾನ್ಯರ ಬದುಕಿನ ಆಶಾಕಿರಣ: ಖಾಸಿಂ

Rashmi Kasaragodu
Updated On : 29 May 2013, 12:29 pm

ವಿಜಯಪುರ: ಬಸವಣ್ಣನವರು 12ನೇ ಶತಮಾದಲ್ಲಿಯೇ ಸಮಾಜಿಕ ಕ್ರಾಂತಿಯ ಹರಿಕಾರನಾಗಿ ಜಾತಿ ವರ್ಣ ರಹಿತ ಸಮಾನತೆಯನ್ನು ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿ ಎಂದು ಕೈವಾರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹಮ್ಮದ್ ಖಾಸಿಂ ತಿಳಿಸಿದರು.
ಅವರು ಪಟ್ಟಣದ ಬಸವ ಕಲ್ಯಾಣ ಮಠದಲ್ಲಿ ಏರ್ಪಡಿಸಿದ್ದ  ಗುರು ಪೂರ್ಣಮ ಕಾರ್ಯಕ್ರಮ ಹಾಗೂ ಚಿಂತನಗೋಷ್ಠಿಯಲ್ಲಿ ಬುದ್ಧ-ಬಸವರ ವಿಷಯವಾಗಿ ಉಪನ್ಯಾಸ ನೀಡುತ್ತಿದ್ದರು. ಭಗವಾನ್ ಬುದ್ಧ ಮನುಷ್ಯರನ್ನು ಮನುಷ್ಯರಂತೆ ಕಾಣುವುದು, ಸರಳ ಜೀವನ ನಡೆಸುವುದು, ಮಾನವೀಯ ಮೌಲ್ಯಗಳ ಬಗ್ಗೆ ತಿಳಿಸಿದ್ದರು.
ಜನಸಮಾನ್ಯರ ಆಶಾಕಿರಣವಾಗಿದ್ದ ಬುದ್ಧ ಹಾಗೂ ಬಸವಣ್ಣನವರ ತತ್ವಗಳು ಸಾಮಾಜಿಕ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಿ ಎಲ್ಲಾ ಕಾಲಕ್ಕೂ ಅನ್ವಯವಾಗುವಂತೆ ವಿಚಾರಧಾರೆ ಹೊಂದಿದ್ದು ಮನುಜ ಮತ, ವಿಶ್ವ ಪಥಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು. ಸಾನಿಧ್ಯ ವಹಿಸಿದ್ದ ಬಸವ ಕಲ್ಯಾಣ ಮಠಾಧ್ಯಕ್ಷರಾದ ಮಹದೇವಸ್ವಾಮಿಗಳು ಮಾತನಾಡಿದರು. ವಿಜಯಪುರ ಪುರಸಭೆಗೆ ನೂತನವಾಗಿ ಅವಿರೋಧವಾಗಿ ಆಯ್ಕೆಯಾದ ಎಂ. ಸತೀಶ್ಕುಮಾರ್ ಮತ್ತು ಎಸ್.ಭಾಸ್ಕರ್ ಅವರನ್ನು ಅಭಿನಂದಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement