ಮತದಾರರ ಭರವಸೆಗೆ ಚ್ಯುತಿ ತರುವುದಿಲ್ಲ'
ಸೂಲಿಬೆಲೆ: ಹೊಸಕೋಟೆ ಕ್ಷೇತ್ರದ ಮತದಾರರು ನನ್ನ ಮೇಲೆ ಭರವಸೆಯಿಟ್ಟು ಆಯ್ಕೆ ಮಾಡಿದ್ದು, ಈ ವಿಶ್ವಾಸಕ್ಕೆ ಎಂದಿಗೂ ಚ್ಯುತಿ ಬರದಂತೆ ಕ್ಷೇತ್ರದ ಅಭಿವೃದ್ಧಿ ಮಾಡುವುದಾಗಿ ಶಾಸಕ ಎಂಟಿಬಿ ನಾಗರಾಜ್ ಭರವಸೆ ನೀಡಿದ್ದಾರೆ.
ಸೂಲಿಬೆಲೆ ಹೋಬಳಿ ಮುತ್ಸಂದ್ರ ಗ್ರಾಮಸ್ಥರು ನೂತನ ಶಾಸಕರಿಗೆ ಹಮ್ಮಿಕೊಂಡಿದ್ದ ಅಭಿನಂದನ ಸಮಾರಂಭದಲ್ಲಿ ಪಾಲ್ಗೊಂಡು ನಂತರ ಶಾಸಕರು ಸುದ್ದಿಗಾರರೊಂದಿಗೆ ಮಾತನಾಡಿದರು.
ಹೊಸಕೋಟೆ ಕ್ಷೇತ್ರದ ಕಾರ್ಯಕರ್ತರು ಮತ್ತು ಮತದಾರರ ಪ್ರೀತಿ ವಿಶ್ವಾಸದಿಂದ ನನ್ನ ಗೆಲವು ಸಾಧ್ಯವಾಯಿತು. ಮತದಾರರು ನನ್ನ ಮೇಲೆ ಇಟ್ಟ ಭರವಸೆಗೆ ಚ್ಯುತಿಯಾಗದಂತೆ ಹೊಸಕೋಟೆ ಕ್ಷೇತ್ರ ಸಮಗ್ರ ಅಭಿವೃದ್ಧಿಗೆ ದುಡಿಯುತ್ತೇನೆ. ಕ್ಷೇತ್ರಕ್ಕೆ ಅಗತ್ಯವಾಗಿರುವ ಯೋಜನೆ ಮತ್ತು ಅನುದಾನಗಳನ್ನು ತರುವಲ್ಲಿ ಶ್ರಮಿಸಲಾಗುವುದು. ಕ್ಷೇತ್ರದ ಪ್ರತಿ ಹಳ್ಳಿ ಪ್ರತಿಯೊಬ್ಬರಿಗೂ ಸರ್ಕಾರಿ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಈಗಾಗಲೇ ತಾಲೂಕಿನ ಎಲ್ಲ ಇಲಾಖೆ ಅಧಿಕಾರಗಳು ಸಭೆ ಕರೆದು ಸೂಚಿಸಲಾಗಿದೆ. ಬಡ ಜನರ ಉದ್ಧಾರಕ್ಕೆ ಕಾರ್ಯಕರ್ತರು ಹೆಚ್ಚಿನ ಕಾಳಜಿವಹಿಸಿ ಸರ್ಕಾರಿ ಸೌಲಭ್ಯಗಳನ್ನು ಅವರಿಗೆ ತಲುಪಿಸುವ ಜವಾಬ್ದಾರಿ ನಿರ್ವಹಿಸಬೇಕು ಎಂದರು.
ಇದೇ ವೇಳೆ ಶಾಸಕರಿಗೆ ಅದ್ಧೂರಿಯಾಗಿ ಸನ್ಮಾನಿಸಿ ಗೌರವಿಸಿದರು. ರಾಜಣ್ಣ, ಶಿವಣ್ಣ, ಮನಿವೆಂಕಟಪ್ಪ, ಭದ್ರಪ್ಪ, ಸಾಧಿಕ್,ಬಸವರಾಜು, ವೆಂಕಟರಾಮು, ಮುರಳಿ, ಮುನಿರಾಜು, ಆನಂದ್, ಚಾನ್ಪಾಷ, ಚನ್ನಪ್ಪ, ನಾಗರಾಜ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.