ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರೇಷ್ಮೆ ಇಲಾಖೆಯಿಂದ 10 ಲಕ್ಷ ಮೌಲ್ಯದ ಸವಲತ್ತು ವಿತರಣೆ

Rashmi Kasaragodu
Updated On : 29 May 2013, 12:29 pm

ಹೊಸಕೋಟೆ: ಪಟ್ಟಣದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎಂ.ಟಿ.ಬಿ. ನಾಗರಾಜ್ ಅವರು ಅರ್ಹ ಫಲಾನುಭವಿಗಳಿಗೆ ಇಲಾಖೆ ವತಿಯಿಂದ ಸುಮಾರು 10 ಲಕ್ಷ ಮೌಲ್ಯದ 40 ಸೌರ ವಿದ್ಯುತ್ ಉಪಕರಣ, 13 ಪವರ್ ಸ್ಚ್ರೇಯರ್ಗಳನ್ನು ರೈತರಿಗೆ ವಿತರಿಸಿದರು.
ವಿತರಣೆ ಬಳಿಕ ಮಾತನಾಡಿದ ಶಾಸಕ ನಾಗರಾಜ್ ಸರಕಾರದ ಸೌಲಭ್ಯಗಳನ್ನು ಅಧಿಕಾರಿಗಳು ಸಮರ್ಪಕವಾಗಿ ತಲುಪಿರಬೇಕು. ರೈತರು ಅದನ್ನು ಪಡೆದುಕೊಳ್ಳಲು ಮುಂದೆ ಬರಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಸಹಾಯಕ ರೇಷ್ಮೆ ಇಲಾಖೆ ನಿರ್ದೇಶಕ ಎನ್.ಟಿ.ಮಂಜುಳಾದೇವಿ ಹಾಜರಿದ್ದರು.
ಇದಕ್ಕೆ ಮುನ್ನ ಬಾಲಕರ ಸರ್ಕಾರಿ ಮಾಧ್ಯಮಿಕ ಶಾಲೆ ಆವರಣದಲ್ಲಿ 12 ನೂತನ ಕೊಠಡಿಗಳಿಗೆ ಶಾಸಕರು ಶಂಕುಸ್ಥಾಪನೆ ನೆರವೇರಿಸಿದರು. ಹೊಸಕೋಟೆ ಯೋಜನಾ ಪ್ರಾಧಿಕಾರಿ ಕೊಠಡಿ ಕಟ್ಟಲು ರು. 68 ಲಕ್ಷ ಅನುದಾನ ನೀಡಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಸಿ. ಬಸವರಾಜೇಗೌಡ, ಮುಖ್ಯ ಶಿಕ್ಷಕ ಕೆ. ರಮೇಶ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement