ಟಿ.ಪಿ.ರಾಮಯ್ಯ ನಿಧನ
ಮಾಗಡಿ: ಮಾಗಡಿ ತಾಲೂಕಿನ ತಿಪ್ಪಸಂದ್ರ ಗ್ರಾಮದ ಗಾಂಧಿವಾದಿ ಟಿ.ಪಿ.ರಾಮಯ್ಯ(79) ಹೃದಯಾಘಾತದಿಂದ ನಿಧನರಾದರು. ಮೃತ ಟಿ.ಪಿ.ರಾಮಯ್ಯ ಅವರು ತಿಪ್ಪಸಂದ್ರ ಗ್ರಾಮದಲ್ಲಿ ಶಿಶುವಿಹಾರ, ಮಾರುತಿ ಪಬ್ಲಿಕ್ ಹೈಸ್ಕೂಲ್, ಸರ್ವೋದಯ ಶಾಲೆಯನ್ನು ಆರಂಭಿಸಿ ಗ್ರಾಮೀಣ ಮಕ್ಕಳಿಗೆ ಅಕ್ಷರ ಜ್ಞಾನವನ್ನು ನೀಡಿದ ಕೀರ್ತಿಗೆ ಪಾತ್ರರಾಗಿದ್ದರು. ವಿನೋಭಬಾವೆ ಅವರ ಜತೆ ಭೂದಾನ ಚಳುವಳಿಯಲ್ಲಿ ಭಾಗವಹಿಸಿದ್ದರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಸನ್ಮಾನಕ್ಕೆ ಪಾತ್ರರಾಗಿದ್ದರು. ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿಣಿ ಸಮಿತಿಯ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಅಭಿಮಾನಿಗಳು, ಬಂಧು ಬಾಂಧವರು ಮೃತರ ಅಂತಿಮ ದರ್ಶನ ಪಡೆದರು. ಸ್ವಗ್ರಾಮ ತಿಪ್ಪಸಂದ್ರದಲ್ಲಿ ಮೃತ ಟಿ.ಪಿ. ರಾಮಯ್ಯ ಅವರ ಅಂತ್ಯಕ್ರಿಯೆ ನೆರವೇರಿತು. ಸಂತಾಪ: ಶಾಸಕ ಎಚ್.ಸಿ. ಬಾಲಕೃಷ್ಣ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಕೆಪಿಸಿಸಿ ಸದಸ್ಯ ಎ.ಮಂಜು, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೆ.ಮುದ್ದುರಾಜ ಯಾದವ್, ಸದಸ್ಯರಾದ ಎಂ.ಕೆ.ಧನಂಜಯ, ವಿಜಯಕುಮಾರ್, ರಂಗಸ್ವಾಮಿ, ಹಂಸಕುಮಾರಿ, ಜಿ.ವಿ.ರಾಮಣ್ಣ, ಪೊಲೀಸ್ ರಾಮಣ್ಣ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂ.ದಯಾನಂದ್, ಸಾಹಿತಿ ಮಾರಣ್ಣ,ಡಿ.ಆರ್.ಚಂದ್ರ ಮಾಗಡಿ, ಪಾನ್ಯಂ.ನಟರಾಜು ಸೇರಿದಂತೆ ನೂರಾರು ಗಣ್ಯರು ಸಂತಾಪ ಸೂಚಿಸಿದರು.