ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶಾಲೆ ಪ್ರಾರಂಭ ದಿನವೇ ಸಮವಸ್ತ್ರ, ಪಠ್ಯಪುಸ್ತಕ ವಿತರಣೆಗೆ ಸಿದ್ಧತೆ

Rashmi Kasaragodu
Updated On : 30 May 2013, 1:17 am

ಹೊಸಕೋಟೆ: ತಾಲೂಕಿನ ಎಲ್ಲಾ ಸರಕಾರಿ ಶಾಲೆಗಳು ಮೇ 31ರಂದು ಪ್ರಾರಂಭಗೊಳ್ಳಲಿದ್ದು, ಸರಕಾರದಿಂದ ಸರಬರಾಜಾಗಿರುವ ಉಚಿತ ಸಮವಸ್ತ್ರ, ಪಠ್ಯಪುಸ್ತಕಗಳನ್ನು ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಇಓ ವಿ.ಸಿ.ಬಸವರಾಜೇಗೌಡ ತಿಳಿಸಿದ್ದಾರೆ.
ತಾಲೂಕಿನಲ್ಲಿ 263 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 16002, 2 ಅನುದಾನಿತ ಶಾಲೆಗಳಲ್ಲಿ 741, 46 ಖಾಸಗಿ ಶಾಲೆಗಳಲ್ಲಿ 11,804 ವಿದ್ಯಾರ್ಥಿಗಳನ್ನು ಅಂದಾಜಿಸಲಾಗಿದೆ. 19 ಸರಕಾರಿ ಪ್ರೌಢಶಾಲೆಗಳಲ್ಲಿ 5986, 5 ಅನುದಾನಿತ ಶಾಲೆಗಳಲ್ಲಿ 1823, 40 ಖಾಸಗಿ ಪ್ರೌಢಶಾಲೆಗಳಲ್ಲಿ 3958 ವಿದ್ಯಾರ್ಥಿಗಳಿದ್ದಾರೆ.
1ರಿಂದ8ನೇ ತರಗತಿಯವರೆವಿಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸರಕಾರದ 1 ಜೊತೆಯೊಂದಿಗೆ ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಹೆಚ್ಚುವರಿಯಾಗಿ 1 ಜೊತೆ ಸಮವಸ್ತ್ರ ಸಹ ನೀಡಲಾಗುವುದು.
1,2,6 ಮತ್ತು 9ನೇ ತರಗತಿಯ ಪಠ್ಯಕ್ರಮ ಬದಲಾವಣೆಗೊಂಡಿದ್ದು ಸರಕಾರಿ ಶಾಲೆಗಳಲ್ಲಿ ನಲಿ ಕಲಿ  ಮಾದರಿ ಅಳವಡಿಸಿಕೊಳ್ಳಲಾಗಿದ್ದು ಪಠ್ಯಪುಸ್ತಕದ ಅವಶ್ಯಕತೆಯಿರುವುದಿಲ್ಲ.
ನೂತನ ಪಠ್ಯಕ್ರಮ ಕೇವಲ ಖಾಸಗಿ ಶಾಲೆಗಳಗೆ ಮಾತ್ರ ಅನ್ವಯಗೊಳ್ಳಲಿದೆ ಎಂದು ತಿಳಿಸಿದರು. ಬದಲಾವಣೆಯಾಗದ 3,4,7,8 ಮತ್ತು 10ನೇ ತರಗತಿಯ ಶೇ.90ರಷ್ಟು ಬದಲಾವಣೆಯಾಗಿರುವ 6 ಮತ್ತು 9ನೇ ತರಗತಿ ಶೇ.50ರಷ್ಟು ಪಠ್ಯಪುಸ್ತಕಗಳ್ನು ಈಗಾಗಲೇ ಶಾಲೆಗಳಿಗೆ ವಿತರಿಸಲಾಗಿದ್ದು, ಉಳಿದ ಪಠ್ಯಪುಸ್ತಕಗಳು ಸಹ ಜೂನ್ ಮೊದಲ ವಾರದಲ್ಲಿ ಪೂರೈಕೆಯಾಗಲಿವೆ ಎಂದರು.
ಪ್ರಾರಂಭೋತ್ಸವ: ಮೇ 31ರಂದು ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಸ್ಥಳಿಯರು, ಮಕ್ಕಳ ಪೋಷಕರನ್ನು ಆಹ್ವಾನಿಸಿ ಮಕ್ಕಳನ್ನು ಸ್ವಾಗತಿಸಲು ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಸಮ್ಮುಖದಲ್ಲಿ ಸವಲತ್ತುಗಳನ್ನು ವಿತರಿಸಲು ಶಾಲಾ ಮುಖ್ಯ ಶಿಕ್ಷಕರು ಸೂಚಿಸಿದ್ದು ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿವಳಿಕೆ ನೀಡಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement