ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಾಮೂಹಿಕ ಉಪನಯನ ಕಾರ್ಯಕ್ರಮ

Rashmi Kasaragodu
Updated On : 30 May 2013, 1:19 am

ಆನೇಕಲ್ಲು: ಪ್ರಾಚೀನ ಕಾಲದಿಂದಲೂ  ಬ್ರಹ್ಮಚರ್ಯ, ಗೃಹಸ್ಥ, ಸನ್ಯಾಸ ಹಾಗೂ ವಾನಪ್ರಸ್ಥ ಎಂಬ ನಾಲ್ಕು ಆಶ್ರಮ ಧರ್ಮಗಳ ಪಾಲನೆ ಪ್ರಚಲಿತದಲ್ಲಿದೆ. ಉಪನಯನ ಕರ್ಮದ ನಂತರ ಗುರುಕುಲ ಸೇರುವ ವಿದ್ಯಾರ್ಥಿಗಳು ಪೂರ್ಣ ಅಧ್ಯಯನ ಮುಗಿಸಿ ಮರಳಿ ಮನೆ ಸೇರುವ ಪದ್ಧತಿ ಹಿಂದೂ ಧರ್ಮದ ಪ್ರಮುಖ ಘಟ್ಟವಾಗಿದೆ ಎಂದು ಆನೇಕಲ್ ತಾಲೂಕು ಬ್ರಾಹ್ಮಣರ ಸಂಘದ ಅಧ್ಯಕ್ಷ ಹಾಗೂ ಚಂದಾಪುರ ವಿಪ್ರ ಮಹಾ ಸಭಾ ಅಧ್ಯಕ್ಷ ಎನ್ ಎಸ್. ನಾಗರಾಜ್ ತಿಳಿಸಿದ್ದಾರೆ.
ಅವರು ಅತ್ತಿಬೆಲೆಯ ಕೋಟೆ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ದೇಗುಲದಲ್ಲಿ ಅತ್ತಿಬೆಲೆಯ ಗಾಯತ್ರಿ ವಿಪ್ರ ವೃಂದ ಹಾಗೂ ಚಂದಾಪುರದ ವಿಪ್ರ ಮಹಾ ಸಭಾ ಏರ್ಪಡಿಸಿದ್ದ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ನೂತನ ವಟುಗಳನ್ನುದ್ದೇಶಿಸಿ ಮಾತನಾಡಿದರು.
ಋಗ್ವೇದ, ಯಜುರ್ವೇದ ಹಾಗೂ ಸಾಮವೇದ ಶೈಲಿಯಲ್ಲಿ ಉಪನಯನ ಸಂಸ್ಕಾರ ನೆರವೇರಿಸಲಾಯಿತು. ಸಮಿತಿಯ ರಾಮಕೃಷ್ಣ, ನಾಗೇಂದ್ರ, ಪ್ರಭಾಕರ್, ಗೌರಿಶಂಕರ್, ಕೃಷ್ಣಮೂರ್ತಿ, ನಾಗರಾಜ್ ಉಪಸ್ಥಿತರಿದ್ದರು.

ಜನಸಂಪರ್ಕ ಸಭೆ
ಹೊಸಕೋಟೆ: ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರಿಂದ ಪರಿವೀಕ್ಷಣಾ ಮಂದಿರದಲ್ಲಿ, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಜನಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ. ಸಾರ್ವಜನಿಕರು ಈ ಸಬೆಗೆ ಭಾಗವಹಿಸಿ ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement