'ಕಲೆ ಉಳಿಸಿ ಬೆಳೆಸುವಲ್ಲಿ ಕಲಾವಿದರ ಪ್ರಮುಖ ಪಾತ್ರ'
ಕ.ಪ್ರ. ವಾರ್ತೆ ಮಾಗಡಿ ಮೇ 30
ಕಲೆಯನ್ನು ನಾಡಿನ ಕಲಾವಿದರು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಕಾಂಗ್ರೆಸ್ ಯುವ ಮುಖಂಡ ಬಿ.ವಿ. ಜಯರಾಮು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಮೋಟಗಾನಹಳ್ಳಿಯಲ್ಲಿ ಚಂದ್ರಮೌಳೇಶ್ವರ ಕೃಪಾಪೋಷಿತ ನಾಟಕ ಮಂಡಲಿ ವತಿಯಿಂದ ನಡೆದ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ರಂಗಸ್ವಾಮಿ ಮಾತನಾಡಿ ಕಲೆ ಕಲಾವಿದರ ಸ್ವತ್ತೇ ವಿನಃ ಇದನ್ನು ಯಾರು ಕಸಿಯಲಾರರು ಎಂದರು.
ಜಿ.ಪಂ. ಮಾಜಿ ಸದಸ್ಯ ಸಿ.ಆರ್. ಗೌಡ, ಹನುಮಂತರಾಯಪ್ಪ, ಚಂದ್ರಪ್ಪ ರೇವಣ್ಣ,ರಾಜು, ನಾಗರಾಜು, ಮೂರ್ತಿ ಇತರರು ಇದ್ದರು. ಸುತ್ತಮುತ್ತಲ ಗ್ರಾಮೀಣ ಭಾಗದ ಕಲಾಭಿಮಾನಿಗಳು ಕುರುಕ್ಷೇತ್ರ ನಾಟಕ ಪ್ರದರ್ಶನವನ್ನು ವೀಕ್ಷಿಸಿದರು.