ಸಿಇಟಿ: ಕೇಂಬ್ರಿಡ್ಜ್ ಕಾಲೇಜು ಸಾಧನೆ
ಚನ್ನಪಟ್ಟಣ: ಪ್ರಸಕ್ತ ಸಾಲಿನ ಸಿಇಟಿ ಫಲಿತಾಂಶದಲ್ಲಿ ಪಟ್ಟಣದ ಕೇಂಬ್ರಿಡ್ಜ್ ಕಾಲೇಜು ಉತ್ತಮ ಸಾಧನೆ ಮಾಡಿದ್ದು ಜಿಲ್ಲೆಯ ಮೊದಲ ಮೂರು ಸ್ಥಾನಗಳನ್ನು ತನ್ನದಾಗಿಸಿ ಕೊಂಡಿದೆ. ಸಂಸ್ಥೆಯ ವಿದ್ಯಾರ್ಥಿ ರಾಜು.ಜಿ.ಪಿ ಮೆಡಿಕಲ್ನಲ್ಲಿ 870 ನೇ ರ್ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮಸ್ಥಾನ ಗಳಿಸಿದರೆ, ಅಕ್ಷತ.ಕೆ.ಗೌಡ ಮೆಡಿಕಲ್ನಲ್ಲಿ 908ನೇ ರ್ಯಾಂಕ್ ಗಳಿಸುವ ಮೂಲಕ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದು ಪಾವನಾ ಗೋಕಲೆ ಮೆಡಿಕಲ್ನಲ್ಲಿ 956ನೇ ರ್ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಸಂಸ್ಥೆಯ 12 ಮಂದಿ ವಿದ್ಯಾರ್ಥಿಗಳು 5ಸಾವಿರ ದೊಳಗೆ ಮೆಡಿಕಲ್ ರ್ಯಾಂಕ್ ಪಡೆದಿದ್ದು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಂಜಿನಿಯರಿಂಗ್ನಲ್ಲಿ10 ಸಾವಿರದೊಳಗೆ ರ್ಯಾಂಕ್ ಪಡೆದಿದ್ದಾರೆ. ಉತ್ತಮ ಫಲಿತಾಂಶ ಪಡೆದಿರುವ ಸಂಸ್ಥೆಯ ವಿದ್ಯಾರ್ಥಿಗಳನ್ನು ಕಾರ್ಯದರ್ಶಿ ಎಸ್.ಲಿಂಗೇಶ್ ಕುಮಾರ್, ಪ್ರಾಂಶುಪಾಲ ನಿಂಗೇಗೌಡ ಅಭಿನಂದಿಸಿದ್ದಾರೆ.
ಇಂಟರ್ನೆಟ್: ಗ್ರಾಹಕರ ಪರದಾಟ
ನೆಲಮಂಗಲ: ಕೈಗಾರಿಕಾ ಪ್ರದೇಶ ಹಾಗೂ ಜನ ವಸತಿ ಪ್ರದೇಶವಾಗಿರುವ ತಾಲೂಕಿನ ದಾಬಸ್ಪೇಟೆಯಲ್ಲಿ ಬಿ.ಎಸ್.ಎನ್.ಎಲ್ ದೂರ ಸಂಪರ್ಕದಲ್ಲಿ ಬಾರಿ ವ್ಯತ್ಯಯ ಆಗುತ್ತಿರುವುದರಿಂದ ಬಿ.ಎಸ್.ಎನ್.ಎಲ್ ಸ್ಥಿರ ಮತ್ತು ಸಂಚಾರ ದೂರವಾಣಿಗಳು ಮತ್ತು ಇಂಟರ್ನೆಟ್ ಸಂಪರ್ಕ ಸರಿಯಿಲ್ಲದೆ ಗ್ರಾಹಕರು ಪರದಾಡುತ್ತಿದ್ದಾರೆ.