ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆನೇಕಲ್: ಸಿಇಟಿ ಶೇ. 100 ಫಲಿತಾಂಶ

Rashmi Kasaragodu
Updated On : 1 Jun 2013, 12:43 pm

ಕ.ಪ್ರ. ವಾರ್ತೆ, ಆನೇಕಲ್, ಮೇ 30
ಆನೇಕಲ್ಲಿನ ಜಯಶ್ರೀ ವಿದ್ಯಾ ಸಂಸ್ಥೆ ಎಸ್‌ಎಸ್‌ಎಲ್‌ಸಿ (ಸಿಬಿಎಸ್‌ಇ)ಯಲ್ಲಿ ಶೇ. 100 ಫಲಿತಾಂಶ ಸಾಧಿಸಿದೆ ಎಂದು ಕಾರ್ಯದರ್ಶಿ ಜಯಶ್ರೀ ಜಿ ನಂಜುಂಡಪ್ಪ ತಿಳಿಸಿದ್ದಾರೆ.
ಅವರು ಫಲಿತಾಂಶ ಪ್ರಕಟ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸತತ 2ನೇ ಬಾರಿ ಶೇ. 100 ಫಲಿತಾಂಶ ಪಡೆಯಲು ಕಾರಣರಾದ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಅಭಿನಂದಿಸಿದರು.
ಸಿಬಿಎಸ್‌ಇಯ ಸಿಜಿಪಿಎಯಲ್ಲಿ 10 ಪಾಯಿಂಟ್ ಗಳಿಸಿದ ಜಿ.ಎಸ್. ಶ್ರವಣ್‌ನನ್ನು ಅಧ್ಯಕ್ಷ  ಜಿ. ನಂಜುಂಡಪ್ಪ ಅಭಿನಂದಿಸಿದರು. ಶ್ರೇಷ್ಠ ದರ್ಜೆ ಅಂಕ ಪಡೆದು ಶಾಲೆ, ಆನೇಕಲ್ ತಾಲೂಕು ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾನೆ ಎಂದರು.
ಶ್ರೇಷ್ಠ ದರ್ಜೆ ಅಂಕ ಪಡೆದ ಇತರ ವಿದ್ಯಾರ್ಥಿಗಳು ಹರ್ಷಿತ ಶೇ. 96, ಶರಣ್ಯ ಶೇ. 94,  ಚೈತ್ರ ಶೇ. 92, ದಿವ್ಯ ಶೇ.92, ಚೇತನ್ ಶೇ. 90 ಹಾಗೂ ಪ್ರಥ್ವಿ ಶೇ. 90 ಪಡೆದಿರುತ್ತಾರೆ.
 ಉಳಿದ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿರುತ್ತಾರೆ. ಗ್ರಾಮೀಣ ಭಾಗದಲ್ಲಿ ಇಂತಹ ಫಲಿತಾಂಶ ನಿಜಕ್ಕೂ ಉತ್ತಮ ಸಾಧನೆಯಾಗಿದೆ. ನಗರ ಪ್ರದೇಶದ ಮಕ್ಕಳಿಗಿಂತ ಗ್ರಾಮೀಣ ಮಕ್ಕಳು ಭಿನ್ನರಲ್ಲ. ಉತ್ತಮ ಹಾಗೂ ಗುಣ ಮಟ್ಟದ ಶಿಕ್ಷಣ ನೀಡಿದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಎಲ್ಲರನ್ನು ಎಲ್ಲವನ್ನೂ ಮೆಟ್ಟಿ ನಿಲ್ಲುತ್ತಾರೆ ಎಂದು ಮುಖ್ಯ ಶಿಕ್ಷಕಿ ಅರ್ಚನ ತಿಳಿಸಿದ್ದಾರೆ.
ಅಭಿನಂದನೆ: ಆನೇಕಲ್ಲಿನ ಜೆಇಟಿ ವಿದ್ಯಾ ಸಂಸ್ಥೆ ಸಿಬಿಎಸ್‌ಇ ವಿಭಾಗದಲ್ಲಿ ಶೇ. 100 ಅಂಕ ಪಡೆದಿರುವುದು ಅಭಿನಂದಾರ್ಹ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ತಿಳಿಸಿದ್ದಾರೆ. ಶಿಕ್ಷಣ ತಜ್ಞ ವಿ.ಎಸ್. ಶ್ರೀನಿವಾಸ ಮೂರ್ತಿ
ಪುರಸಭಾ ಮಾಜಿ ಅಧ್ಯಕ್ಷ ಪಿ. ಶಂಕರ್‌ಕುಮಾರ್, ಸೋಮಶೇಖರರೆಡ್ಡಿ, ಶಾಸಕ ಬಿ. ಶಿವಣ್ಣ ಅಭಿನಂದನೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement