ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಟ್ಟೆ ಒಗೆಯಲು ಹೋದ 3 ಮಕ್ಕಳು ನೀರುಪಾಲು

Rashmi Kasaragodu
Updated On : 1 Jun 2013, 12:30 pm

ಕ.ಪ್ರ. ವಾರ್ತೆ   ಆನೇಕಲ್ಲು  ಮೇ 31
ಬಟ್ಟೆ ಒಗೆಯಲು ಹೋದ ಒಂದೇ ವಠಾರದ ಮೂವರು ಮಕ್ಕಳು ನೀರು ಪಾಲಾದ ಹೃದಯ ವಿದ್ರಾವಕ ಘಟನೆ ಸಮೀಪದ ಕೂಡ್ಲು ಬಳಿ ನಡೆದಿದೆ. ಶುಕ್ರವಾರ ಮಧ್ಯಾಹ್ನ ಬಟ್ಟೆ ಒಗೆಯಲು ಕೂಡ್ಲು ಗ್ರಾಮದ ಐಶ್ವರ್ಯ (13) ಮತ್ತು ಮೇಘನಾ (13) ಹಾಗೂ ಲೋಕೇಶ್ (12) ನೀರು ಪಾಲಾಗಿದ್ದಾರೆ.  
 ಇವರಲ್ಲಿ ಐಶ್ವರ್ಯ ಹಾಗೂ ಮೇಘನಾ ಶವ ದೊರೆತಿದ್ದು, ಮತ್ತೊಬ್ಬ ಬಾಲಕ ಲೋಕೇಶನ(12) ಶವ ಪತ್ತೆಯಾಗಿಲ್ಲ.  ಮಳೆಯ ನಡುವೆಯೇ ಗೃಹ ರಕ್ಷಕ ದಳ ಸಿಬ್ಬಂದಿ ಲೋಕೇಶನ ಶವಕ್ಕಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು.
ಘಟನೆ ವಿವರ: ಮೇಘನಾ ಮತ್ತು ಐಶ್ವರ್ಯ ಬಟ್ಟೆ ತೊಳೆಯುತ್ತಿದ್ದಾಗ ಲೋಕೇಶ ನೀರಿಗಿಳಿದನು. ಮುಳುಗುತ್ತಿರುವ ಇವನನ್ನು ರಕ್ಷಿಸಲು ಐಶ್ವರ್ಯ ಮತ್ತು ಮೇಘನಾ ಕೈ ಚಾಚಿದಾಗ ಆಯ ತಪ್ಪಿ ಮೂವರೂ ನೀರಿನಲ್ಲಿ ಮುಳುಗಿದರೆಂದು ಮತ್ತೊಂದು ಪಾರ್ಶ್ವದಲ್ಲಿ ಬಟ್ಟೆ ತೊಳೆಯುತ್ತಿದ್ದ ಪ್ರತ್ಯಕ್ಷದರ್ಶಿ ಸಾಂಘವಿ ಎಂಬುವರು ತಿಳಿಸಿದ್ದಾರೆ.
ಮೃತ್ಯು ಕೂಪ ಬಂಡೆ: ಕೂಡ್ಲು ನಿವಾಸಿ ಸಾಕಪ್ಪ ಎಂಬುವರು ಹೇಳುವಂತೆ 80 ಅಡಿ ಆಳ 150 ಅಡಿ ಅಗಲ ಇರುವ ಈ ಬಂಡೆಯಲ್ಲಿ ಮೊದಲಿಗೆ ಕ್ವಾರಿ ಕೆಲಸ ನಡೆಯುತ್ತಿತ್ತು. ವಾಹನಗಳು ಮೇಲಕ್ಕೆ ಬರಲಾಗದ ಸ್ಥಿತಿಯಲ್ಲಿ ಈ ಬಂಡೆ ಕೊರೆಯಲಾಗಿದೆ.
  ಈಗ್ಗೆ ಕೆಲ ವರ್ಷಗಳ ಹಿಂದೆ ಪಟಾಕಿ ಶ್ರೀನಿವಾಸ್ ಎಂಬುವವರು ಈ ಸ್ಥಳವನ್ನು ಖರೀದಿಸಿದ್ದಾರೆ. ಅವರು ಬೇಲಿ ಹಾಕಿ ಸ್ಥಳವನ್ನು ಭದ್ರಪಡಿಸಿಲ್ಲ. ಮಳೆ ಬಂದಾಗ ಈ ಮೃತ್ಯು ಕೂಪದಲ್ಲಿ ನೀರು ನಿಲ್ಲುತ್ತದೆ.  
 ಬಟ್ಟೆ ತೊಳೆಯಲು  ಅಥವಾ ಜೀವನದಲ್ಲಿ ಜಿಗುಪ್ಸೆ ಆದವರು ಆತ್ಮಹತ್ಯೆ ಮಾಡಿಕೊಳ್ಳಲು ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.  
 ಈವರೆಗೂ ಅಂದಾಜು 50 ಜನರ ಸಾವಿಗೆ ಈ ಬಂಡೆ ಸಾಕ್ಷಿಯಾಗಿದೆ. ಈ ಕೂಡಲೇ  ಬಿಬಿಎಂಪಿ ಅಧಿಕಾರಿಗಳು ಈ ಜಾಗ ವಶಪಡಿಸಿಕೊಂಡು ತಂತಿ ಬೇಲಿ ಅಳವಡಿಸಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement