ಹೊಸಕೋಟೆ ಶಾಲೆ ಆರಂಭ
ಹೊಸಕೋಟೆ: ಶುಕ್ರವಾರ ಶಾಲಾ ಆರಂಭೋತ್ಸವ ಕಾರ್ಯಕ್ರಮವನ್ನು ಇಲ್ಲಿನ ಶಾಲೆಯಲ್ಲಿ ಹಮ್ಮಿಕೊಳಲಾಗಿತ್ತು. ಸಮಾರಂಭಕ್ಕೆ ಉಪ ನಿರ್ದೇಶಕರು ಕಚೇರಿಯಿಂದ ಮಹದೇವ ನಾಯಕ್ ವಿಷಯ ಪರಿವೀಕ್ಷಕರು ಆಗಮಿಸಿದ್ದರು. ಶಾಲಾ ಆರಂಭೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರ ಒದಗಿಸಿರುವ ಉಚಿತ ಪಠ್ಯಪುಸ್ತಕ, ಸಮವಸ್ತ್ರ ನೋಟ್ ಪುಸ್ತಕ, ವಿದ್ಯಾರ್ಥಿವೇತನ, ಬಿಸಿಯುಟದ ಕಾರ್ಯಕ್ರಮ ಒದಗಿಸಿರುತ್ತದೆ. ಈ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ಮುಖ್ಯ ಶಿಕ್ಷಕಿ ಎಂ.ಪಿ.ಸಾವಿತ್ರಿದೇವಿ ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ ನೀಡಿ ಶಾಲೆಗೆ ಕೀರ್ತಿ ತರಬೇಕೆಂದು ತಿಳಿಸಿದರು. ಸಹ ಶಿಕ್ಷಕ ಬಚ್ಚೇಗೌಡ ಸ್ವಾಗತಿಸಿದರು. ರಮಾದೇವಿ ವಂದಿಸಿದರು. ಇದೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲಾಯಿತು. ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವ್ಯಕ್ತಿ ನಿಗೂಢ ಸಾವು
ಹೊಸಕೋಟೆ: ತಾಲೂಕಿನ ಮಲ್ಲಿ ಮಾಕನಪುರ-ಭೀಮಕ್ಕನಹಳ್ಳಿ ಗ್ರಾಮಗಳ ಮಧ್ಯದ ಚನ್ನಪ್ಪರೆಡ್ಡಿ ಎಂಬುವರಿಗೆ ಸೇರಿದ ನೀಲಗಿರಿ ತೋಪಿನಲ್ಲಿ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾನೆ. ಸುಮಾರು 5.5 ಅಡಿ ಎತ್ತರ, ಕೋಲು ಮುಖ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು ಅರ್ಧ ತೋಳಿನ ಗೆರೆಗಳುಳ್ಳ ಅಂಗಿ, ಮಾಸಲ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಸತ್ತು ಒಂದೆರಡು ದಿನಗಳಾಗಿದ್ದು, ಇರುವೆಗಳು ದೇಹಪೂರ್ತಿ ಮತ್ತು ಚರ್ಮ ತಿಂದು ಹಾಕಿರುವುದರಿಂದ ವ್ಯಕ್ತಿಯ ಚಹರೆ ಗುರುತಿಸಿಲು ಸಾಧ್ಯವಾಗಿಲ್ಲ. ವಾರಸುದಾರರು ಯಾರಾದರೂ ಇದ್ದಲ್ಲಿ ನಂದಗುಡಿ ಪೊಲೀಸ್ ಠಾಣೆ ದೂ.(808)-27961250 ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.