ಎಲ್ಲರೂ ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಲಿ: ಕೃಷ್ಣಮೂರ್ತಿ
ವಿಜಯಪುರ: ಪ್ರತಿಯೊಬ್ಬರೂ ಕನ್ನಡ ಭಾಷಾಭಿಮಾನವನ್ನು ಬೆಳೆಸಿಕೊಳ್ಳುವುದರ ಜೊತೆಗೆ ನಮ್ಮ ನಾಡು ನುಡಿಯ ಹಿಂದಿನ ಇತಿಹಾಸವನ್ನು ಅರಿತುಕೊಳ್ಳಬೇಕು ಎಂದು ಜೆಸಿಐ ಕಾರ್ಯದರ್ಶಿ ಕೃಷ್ಣಮೂರ್ತಿ ತಿಳಿಸಿದರು.
ಅವರು ಪಟ್ಟಣದ ಖುಬಾ ಮಸೀದಿ ವೃತ್ತದಲ್ಲಿ ದೇವನಹಳ್ಳಿ ತಾಲೂಕು ಕಸಾಪ, ಭಾಷಾ ಅಲ್ಪಸಂಖ್ಯಾತರ
ಕನ್ನಡ ಸಾಹಿತ್ಯ ಪರಿಷತ್ತು ಘಟಕ ಟಿಪ್ಪು ಸುಲ್ತಾನ್ ಪ್ರಚಾರ ಸಮಿತಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಎಲ್ಲಾ ಸಮಯದಲ್ಲೂ ಹಾಗೂ ಎಲ್ಲಾ ರಂಗಗಳಲ್ಲೂ ನಮ್ಮ ಭಾಷೆಯನ್ನು ಹೆಚ್ಚು ಬಳಸುವುದರಿಂದ ಕನ್ನಡ ಭಾಷೆ ಎಂದೂ ಅಳಿಯುವುದಿಲ್ಲ ಎಂದರು.
ಜೇಸಿಐ ಅಧ್ಯಕ್ಷ ಅನೀಸ್ ಮಾತನಾಡಿ, ಅಲ್ಪಸಂಖ್ಯಾತರು ಹೆಚ್ಚಿನ ರೀತಿಯಲ್ಲಿ ಕನ್ನಡ ಭಾಷೆ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ಬಹಳಷ್ಟು ಕಡೆ ಭಾಷೆಯನ್ನು ಗಣನೆಗೆ ತೆಗೆದುಕೊಳ್ಳದೇ ಇರುವುದು ಶೋಚನೀಯ ಎಂದರು. ಖುಬಾ ಮಸೀದಿ ಉಪಾಧ್ಯಕ್ಷ ಎಸ್. ಸರ್ದಾರ್ ಸಾಬ್, ನಜೀರ್ ಸಾಬ್, ಶಫೀವುಲ್ಲಾ, ಟಿಪ್ಪು ಸುಲ್ತಾನ್ ಪ್ರಚಾರ ಸಮಿತಿ ಅಧ್ಯಕ್ಷ ಶೇಖ್ ಮುಜಾಯಿದ್, ಉಪಾಧ್ಯಕ್ಷ ನಿಜಾಮ್, ಕಾರ್ಯದರ್ಶಿ ಕಲೀಂ,
ಖಜಾಂಜಿ ತಬರೇಜ್, ಸದಸ್ಯರಾದ ಚಾಂದ್ ಪಾಷ,ರಫೀ, ಮತ್ತಿತರರು ಉಪಸ್ಥಿತರಿದ್ದರು.