ಕನ್ನಡ ರಾಜ್ಯೋತ್ಸವ ಕೊಡುಗೆ
ಹೊಸಕೋಟೆ: ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಸಂಬಂಧಿಸಿದಂತೆ ಕನ್ನಡ ರಾಜ್ಯೋತ್ಸವದ ಕೊಡುಗೆಯಾಗಿ ಹೊಸಕೋಟೆ ಕನ್ನಡ ಸಾಹಿತ್ಯ ವರಿಷತ್ತು ವತಿಯಿಂದ ನ.15ರಂದು ನಡೆಯುವ ಕನ್ನಡೇತರರಾದ ಹಿಂದಿ, ಇಂಗ್ಲಿಷ್, ಉರ್ದು, ತೆಲಗು ಮೊದಲಾದ ಭಾಷಿಕರಿಗೆ ಉಚಿತವಾಗಿ ಕನ್ನಡ ಭಾಷೆಯನ್ನು ಬೋಧಿಸಲಾಗುವುದು ಆಸಕ್ತರು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ನವೆಂಬರ್12 ರೊಳಗಾಗಿ ಸಂಜೆ 5.30ರಿಂದ 9.30ರ ವರೆಗೆ ಸಂಪರ್ಕಿಸಬಹುದೆಂದು ಕ.ಸಾ.ಪ ಅಧ್ಯಕ್ಷ. ಶ್ರೀಕಾಂತ್ (9481189433) ತಿಳಿಸಿದ್ದಾರೆ.
ನಾಳೆಯಿಂದ ಯೋಗ ತರಬೇತಿ ಶಿಬಿರ
ಹೊಸಕೋಟೆ: ಸ್ವಾಮಿ ವಿವೇಕಾನಂದ ಯೋಗ ಶಿಕ್ಷಣ ಸಮಿತಿ ಆಶ್ರಯದಲ್ಲಿ 10ನೇ ಉಚಿತ ಯೋಗ ತರಬೇತಿ ಶಿಬಿರ ವಟ್ಟಣದ ತಮ್ಮೇಗೌಡ ಬಡಾವಣೆಯ ಸ್ತ್ರೀ ಶಕ್ತಿ ಮಾರುಕಟ್ಟೆ ಮಳಿಗೆ ಆವರಣದಲ್ಲಿ ನ.11 ಸೋಮವಾರದಿಂದ ಆರಂಭವಾಗಲಿದೆ. 40 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಸಮಯ ನಿಗದಿಪಡಿಸಲಾಗಿದೆ. 10 ವರ್ಷ ಮೇಲ್ಪಟ್ಟ ಆಸಕ್ತರು ಭಾಗವಹಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಮೊ.9901008668 -9740151700 ಸಂಪರ್ಕಿಸಿ.
ಮಾಜಿ ಸಚಿವ ನಾರಾಯಣ ಸ್ವಾಮಿಗೆ ಪಿತೃ ವಿಯೋಗ
ಆನೇಕಲ್ಲು: ಮಾಜಿ ಸಚಿವ ಎ. ನಾರಾಯಣಸ್ವಾಮಿರವರ ತಂದೆ ಅಬ್ಬಯ್ಯ (96) ಶುಕ್ರವಾರ ನಿಧನರಾದರು. ಅವರಿಗೆ ಪುರಸಭಾ ಮಾಜಿ ಸದಸ್ಯ ಉದಯ ಕುಮಾರ್ ಸೇರಿದಂತೆ ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರಿದ್ದಾರೆ. ಶನಿವಾರ ಆನೇಕಲ್ಲಿನ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿತು. ಅಬ್ಬಯ್ಯ ಅವರ ಅಂತಿಮ ದರ್ಶನಕ್ಕೆ ಹಲವಾರು ಗಣ್ಯರು ಆಗಮಿಸಿದ್ದರು. ಸಂಸದ ಪಿ.ಸಿ. ಮೋಹನ್, ಮಾಜಿ ಸಚಿವರಾದ ಆರ್. ಅಶೋಕ್, ಈಶ್ವರಪ್ಪ, ಸಿ.ಟಿ. ರವಿ, ಶಾಸಕರಾದ ಬಿ. ಶಿವಣ್ಣ, ಎಂ. ಕೃಷ್ಣಪ್ಪ, ಎಂ. ಸತೀಶ್ ರೆಡ್ಡಿ, ಮುನಿರಾಜು, ಎಂ.ಯಂಗಾರೆಡ್ಡಿ, ಪುರಸಭಾ ಸದಸ್ಯರಾದ ಕೆ. ನಾಗರಾಜು, ನರಸಿಂಹರೆಡ್ಡಿ, ಬ್ರಾಹ್ಮಣ ಸಂಘದ ಅಧ್ಯಕ್ಷ ಸಿ.ಬಿ. ರಾಮಮೂರ್ತಿ ಸೇರಿದಂತೆ ಸಹಸ್ರಾರು ಗಣ್ಯರು ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಮಣ್ಣಿನ ಮಕ್ಕಳ ಏಕತಾ ಸಮಾವೇಶ ಇಂದು
ದೊಡ್ಡಬಳ್ಳಾಪುರ: ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಹಿನ್ನೆಲೆಯಲ್ಲಿ ಒಕ್ಕಲಿಗರ ಸಂಘ ಕಟ್ಟಿದ ಮುಖಂಡ ಕೆ.ಎಚ್.ರಾಮಯ್ಯ ಅವರ ಕ್ಷೇತ್ರವಾದ ದೊಡ್ಡಬಳ್ಳಾಪುರದಲ್ಲಿ ಮಣ್ಣಿನ ಮಕ್ಕಳ ಏಕತಾ ಸಮಾವೇಶ ಆಯೋಜನೆಗೊಳಿಸಲಾಗಿದೆ ಎಂದು ಡಾ.ನಾರಾಯಣ್ ತಿಳಿಸಿದ್ದಾರೆ. ನ.10ರ ಭಾನುವಾರ ಬೆಳಗ್ಗೆ 11 ಗಂಟೆಗೆ ಇಲ್ಲಿನ ಡಿಕ್ರಾಸ್ ಬಳಿಯ ಲಕ್ಷ್ಮೀ ಗ್ರಾನೈಟ್ಸ್ ಹಿಂಭಾಗ ಫೆಡರಲ್ ಬ್ಯಾಂಕ್ ಬಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.