ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಗ್ರಾಮೀಣ ಭಾಗದ ಶಾಲಾ ಮಕ್ಕಳು ವಿಜ್ಞಾನದ ಒಳ ಅರಿವು ಅರಿಯಲಿ'

Rashmi Kasaragodu
Updated On : 10 Nov 2013, 12:36 pm

ನೆಲಮಂಗಲ: ಗ್ರಾಮೀಣ ಭಾಗದ ಶಾಲಾ ಮಕ್ಕಳು ವಿಜ್ಞಾನದ ಒಳ ಅರಿವು ಅರಿತು ಹೆಚ್ಚಿನ ಆಸಕ್ತರಾಗಿ ಉತ್ತಮ ಸಂಶೋಧಕ ವಿಜ್ಞಾನಿಗಳಾಗಬೇಕೆಂಬ ಮಹದಾಸೆ ನಮ್ಮದಾಗಿದೆ ಎಂದು ಇಸ್ರೋ ಸಂಸ್ಥೆ ವಿಜ್ಞಾನಿ ಶಿವಾನಂದ ಹೇಳಿದರು.
ಅವರು ಪಟ್ಟಣದ ಸನ್‌ರೈಸ್ ಆಂಗ್ಲಶಾಲೆಯಲ್ಲಿ ವಿಶ್ವ ಬಾಹ್ಯಾಕಾಶ ಸಪ್ತಾಹದ ಪ್ರಯುಕ್ತ ದ್ರವಚಾಲನೆ ವ್ಯವಸ್ಥಾಕೇಂದ್ರ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿಯಾಗಿ ಆಯೋಜಿಸಿರುವ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಮಾತನಾಡುತ್ತಾ ವಿಜ್ಞಾನ ಬೆಳೆದಂತೆ ಸಮಾಜದಲ್ಲಿ ನಾಗರಿಕತೆ ಬದಲಾವಣೆಯಾಗುತ್ತದೆ. ಗ್ರಾಮೀಣ ವಿದ್ಯಾರ್ಥಿಗಳಲ್ಲಿರುವ ಕಲಿಕಾ ಆಸಕ್ತಿಗೆ ಅನುಗುಣವಾಗಿ ಅವರಿಗೆ ಪೂರಕವಾಗಿ ಮನದಟ್ಟು ಮಾಡುವುದರಿಂದ ಮುಂದಿನ ದಿನ ಹೊಸ ಹೊಸ ಆವಿಷ್ಕಾರಗಳಿಗೆ ಉತ್ತೇಜಿಸಿದಂತಾಗುತ್ತದೆ ಎಂದರು.
ಬಾಹ್ಯಾಕಾಶ ಸಂಸ್ಥೆಯ ವತಿಯಿಂದ ನಡೆಯುವ ಉಪಗ್ರಹಗಳ ಉಡಾವಣೆ, ಗ್ರಹಗಳ ಯಾನಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಗ್ರಾಮಾಂತರ ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತಲೂ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ವಿಜ್ಞಾನ ಪ್ರಪಂಚಕ್ಕೆ ದಾಪುಗಾಲು ಹಾಕಬೇಕೆಂದರು.
ಈ ವಸ್ತು ಪ್ರದರ್ಶನದಲ್ಲಿ  ಇಸ್ರೋ ಸಂಸ್ಥೆ ಮಾಡಿರುವ ಆವಿಷ್ಕಾರದ ಸಾರಾಂಶಗಳನ್ನೊಳಗೊಂಡ ಸಾಕ್ಷಚಿತ್ರ  ಸಹಿತ  ವಿವರಗಳನ್ನು ಮಾರ್ಗದರ್ಶಕರು ತಾಲೂಕಿನ ಸಾವಿರಾರು  ವಿದ್ಯಾರ್ಥಿಗಳಿಗೆ ತಿಳಿಸಿದರು.
ಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನದ ರಸಪ್ರಶ್ನೆ ಕಾರ್ಯಕ್ರಮ, ಬಾಹ್ಯಾಕಾಶದ ಕಲ್ಪನೆಯ ಚಿತ್ರ , ಸ್ಪರ್ಧೆ ಚರ್ಚಾ ಸ್ಪರ್ಧೆಗಳನ್ನು ಸಂಸ್ಥೆ ಆಯೋಜಿಸಿತ್ತು. ಈ ಸ್ಪರ್ಧೆಗಳಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪತ್ರ ಹಾಗೂ ಬಹುಮಾನ ಪಡೆದರು.
 ಸಂಸ್ಥೆಯ ವಿಜ್ಞಾನಿಗಳಾದ ಗಂಗಾಧರ ವಾಸುದೇವ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಾನಾಯಕ್ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement