ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಒಕ್ಕಲಿಗರ ಸಂಘದಲ್ಲಿ ಕಪ್ಪು ಹಣದ ಪ್ರಾಬಲ್ಯ

Rashmi Kasaragodu
Updated On : 11 Nov 2013, 1:03 am

ದೊಡ್ಡಬಳ್ಳಾಪುರ: ಒಕ್ಕಲಿಗರ ಸಂಘವನ್ನು ಕಪ್ಪುಹಣದಿಂದ ನಿಯಂತ್ರಿಸುವ ಶಕ್ತಿಗಳು ಹುಟ್ಟಿಕೊಂಡಿವೆ. ಸಂಘದ ಮೂಲೋದ್ದೇಶಗಳನ್ನು ಗಾಳಿಗೆ ತೂರುವ ಮೂಲಕ ಚುನಾವಣೆಯಲ್ಲಿ ಹಣ ಬಲದಿಂದ ಓಟುಗಳನ್ನು ಕೊಳ್ಳುವ ಕಸರತ್ತು ನಡೆಯುತ್ತಿರುವುದು ವಿಷಾದನೀಯ ಎಂದು ಪ್ರೊ.ಕೆ.ಮಲ್ಲಯ್ಯ ಆರೋಪಿಸಿದರು.
ಇಲ್ಲಿನ ಡಿಕ್ರಾಸ್ ಬಳಿಯ ಫೆಡರಲ್ ಬ್ಯಾಂಕ್ ಸಮೀಪ ಭಾನುವಾರ ನಡೆದ ಮಣ್ಣಿನ ಮಕ್ಕಳ ಏಕತಾ ಸಮಾವೇಶದ ಹಿನ್ನಲೆಯಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ಈ ರಾಜ್ಯದಲ್ಲಿ ಮಹತ್ವದ ಉದ್ದೇಶಗಳ ಸಾಧನೆಗಾಗಿ ಆರಂಭವಾಯಿತು. 1906ರಲ್ಲಿ ದೊಡ್ಡಬಳ್ಳಾಪುರ
ತಾಲೂಕಿನ ಕೆ.ಎಚ್.ರಾಮಯ್ಯ ಅವರ ಪರಿಶ್ರಮದ ಫಲವಾಗಿ ಜನ್ಮತಳೆದ ಸಂಘ ತನ್ನ ಆಶೋತ್ತರಗಳ ಸಾಧನೆಗೆ ನಿರಂತರ ಶ್ರಮವಹಿಸಿದೆ. ಆದರೆ ಇಂದು ವ್ಯವಸ್ಥಿತ ಸಂಘವನ್ನು ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುವ ಕೆಲಸ ನಡೆಯುತ್ತಿದೆ. ಒಕ್ಕಲಿಗರ ಅಖಂಡ ಸಂಘಟನೆಯನ್ನು ಸದೃಢಗೊಳಿಸಲು ಎಲ್ಲರೂ ಒಂದಾಗಬೇಕದೆ. ಪಕ್ಷಾತೀತವಾಗಿ ಒಗ್ಗೂಡಿದರೆ ಮಾತ್ರ ಸಂಘಟನೆ ಸಾಧ್ಯ. ನಾಶವಾಗುವ ಮುನ್ನ ಜಾಗೃತಗೊಳ್ಳುವುದು ಒಳಿತು. ಕೆಲವು ರಾಜಕಾರಣಿಗಳ ಮತ್ತು ಸಂಘದ ಪ್ರಭಾವಿಗಳ ಒಡೆದು ಆಳುವ ನೀತಿಯಿಂದ ಜನಾಂಗಕ್ಕೆ ಘೋರ ಅನ್ಯಾಯವಾಗುತ್ತಿದೆ. ಒಗ್ಗಟ್ಟು ರೂಪಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಸಂಘಟಿತ ಹೋರಾಟವಿಲ್ಲ: ಅನ್ನದಾತನೆನಿಸಿದ ರೈತನನ್ನು ಇಂದು ಸಮಾಜ ಹಲವು ರೀತಿಯಲ್ಲಿ ಶೋಷಣೆಗೊಳಪಡಿಸುತ್ತಿದೆ. ಆದರೆ ಅದರ ವಿರುದ್ಧ ಸಂಘಟಿತ ಹೋರಾಟ ಸಾಧ್ಯವಾಗುತ್ತಿಲ್ಲ. ಒಕ್ಕಲಿಗರನ್ನು ಹಲವು ಉಪ ಪಂಗಡಗಳಾಗಿ ಒಡೆಯುವ ಹುನ್ನಾರಗಳು ನಡೆಯುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಜನಾಂಗದ ಹಿತಾಸಕ್ತಿ ಕೇಳುವವರಿಲ್ಲದಂತಾಗಿದೆ. ಭೂಮಿ, ಒಕ್ಕಲುತನ, ನೆಲದ ಸಂಸ್ಕೃತಿ, ಜನಾಂಗೀಯ ಭಾವನಗಳು ವಿನಾಶವಾಗುತ್ತಿದ್ದು ಮುಂಬರುವ ದಿನಗಳಲ್ಲಿ ಇದೇ ಪರಿಸ್ಥಿತಿ ಮುಂದುವರೆದರೆ ಅಸ್ತಿತ್ವದ ಪ್ರಶ್ನೆ ಎದುರಾದರೂ ಅಚ್ಚರಿಯಿಲ್ಲ ಎಂದರು.
ಶಾಶ್ವತ ನೀರಾವರಿ: ಬಯಲುಸೀಮೆಯ ರೈತರಿಗೆ ವರದಾನವಾಗಲಿರುವ ಶಾಶ್ವತ ನೀರಾವರಿ ಯೋಜನೆ, ಡಾ.ಪರಮಶಿವಯ್ಯ ವರದಿ ಜಾರಿ ಕೂಡಲೇ ಆಗಬೇಕು. ಈ ನಿಟ್ಟಿನಲ್ಲಿ ಒಕ್ಕಲಿಗರ ಸಂಘ ಬೀದಿಗಿಳಿದು ಹೋರಾಟ ಮಾಡಬೇಕು. ರಾಜಕಾರಣಿಗಳ ಮೇಲೆ ಪ್ರಭಾವ ಬೀರುವ ಕೆಲಸ ಆಗಬೇಕು. ಒಕ್ಕಲಿಗರ ಸಂಘ ಒಕ್ಕೊರಲ ಒತ್ತಾಯ ಮಾಡಿದರೆ ಯಾವ ಸರ್ಕಾರವೇ ಆದರೂ ಆಗ್ರಹವನ್ನು ಕಡೆಗಣಿಸಲು ಸಾಧ್ಯವಿಲ್ಲ. ಆದರೆ ಸಮಸ್ಯೆ ಬಿಗಡಾಯಿಸುತ್ತಲೇ ಇದೆ. ಅನ್ನ ನೀಡುವ ಮಣ್ಣಿನ ಮಕ್ಕಳು ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ಸಂಘಟಿತ ಹೋರಾಟ ಅಗತ್ಯವಿದೆ ಎಂದರು.
ಒಕ್ಕಲಿಗ ಮುಖಂಡ ಡಾ.ನಾರಾಯಣ್ ಮಾತನಾಡಿ, ಒಕ್ಕಲಿಗರ ಸಂಘದ ಚುನಾವಣೆ ಸನ್ನಿಹಿತವಾಗುತ್ತಿದ್ದು, ಸಂಘದ ಸಂಸ್ಥಾಪಕ ಕೆ.ಎಚ್.ರಾಮಯ್ಯ ಮತ್ತು ಹಲವು ಮಹನೀಯರ ಆಶೋತ್ತರಗಳಂತೆ ಪ್ರೊ.ಕೆ.ಮಲ್ಲಯ್ಯ ತಂಡ ಕಾರ್ಯನಿರ್ವಹಿಸಲು ಸಿದ್ಧವಿದೆ. ದೊಡ್ಡಬಳ್ಳಾಪುರದಲ್ಲಿ ಶಾಶ್ವತ ಸೇವಾ ಸಂಸ್ಥೆಯನ್ನು ಸ್ಥಾಪಿಸುವ ಮಹೋದ್ದೇಶ ಹೊಂದಲಾಗಿದೆ. ಜನಾಂಗದ ಬೆಂಬಲ ಈ ತಂಡಕ್ಕೆ ಅಗತ್ಯ ಎಂದರು.
ಚುನಾವಣಾ ಸ್ಪರ್ಧಾಕಾಂಕ್ಷಿಗಳಾಗಿರುವ ಸಿ.ಎಂ.ಮಾರೇಗೌಡ, ಎನ್. ಗಿರೀಶ್ಗೌಡ, ಮರಿದೇವ್ರು ಕೆ.ಟಿ.ಕೃಷ್ಣಯ್ಯಗೌಡ, ಮಹದೇವಮ್ಮ, ಮರಿಮಲ್ಲಯ್ಯ, ಶಿವಣ್ಣ, ಎಸ್.ವಿ. ಪ್ರಮೋದ್ಗೌಡ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement