ಟಿಪ್ಪು ಸುಲ್ತಾನ್ ಹುಟ್ಟುಹಬ್ಬ ಆಚರಣೆ
ದೇವನಹಳ್ಳಿ: ಮೈಸೂರು ಹುಲಿ ಟಿಪ್ಪು ಸುಲ್ತಾನರ ಜನ್ಮ ಸ್ಥಳವಾದ ದೇವನಹಳ್ಳಿಯಲ್ಲಿ ತಾಲೂಕು ಕಚೇರಿ ಬಳಿ ಇರುವ ಟಿಪ್ಪು ಪ್ರತಿಮೆಗೆ ಶಾಸಕ ಪಿಳ್ಳಮುನಿಶಾಮಪ್ಪ ಗೌರವ ಸಮರ್ಪಣೆ ಮಾಡಿದರು.
ಇದೇ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ರೆಯಾನ್ ಫೌಂಡೇಷನ್ ಸಂಸ್ಥೆಯ ಕಾರ್ಯಕರ್ತರು ಮತ್ತು ವಿಜಯಪುರ ಟಿಪ್ಪು ಸುಲ್ತಾನರ ಸಂಘದವರು ಟಿಪ್ಪು ಪ್ರತಿಮೆಗೆ ಹಾರ ಸಮರ್ಪಿಸಿದರಲ್ಲದೆ ವಿಜಯಪುರದಲ್ಲೂ ಟಿಪ್ಪು ಪ್ರತಿಮೆ ಪ್ರತಿಷ್ಠಾಪಿಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕರಿಗೆ ಮನವಿ ಮಾಡಿದರು. ಪುರಸಭಾ ಸದಸ್ಯರಾದ ವೈ.ಸಿ.ಸತೀಶ್ಕುಮಾರ್, ಗೋಪಾಲ್, ಶಶಿಕುಮಾರ್, ಕುರುಬರಹಳ್ಳಿ ನಾಗರಾಜ್ ಹಾಗೂ ಪ್ರಜಾ ವಿಮೋಚನಾ ಚಳುವಳಿಯ ಸಂಚಾಲಕ ಲಕ್ಷ್ಣಣ್ ಉಪಸ್ಥಿತರಿದ್ದರು.