ಮ್ಯಾನ್ಹೋಲ್ನಿಂದ ರಸ್ತೆ ಸಂಚಾರಕ್ಕೆ ಅಡ್ಡಿ
ವಿಜಯಪುರ: ಇಲ್ಲಿನ ವೈಶ್ಯ ಬ್ಯಾಂಕ್ ರಸ್ತೆಯಲ್ಲಿರುವ ಒಳಚರಂಡಿಯ ಮ್ಯಾನ್ಹೋಲ್ ಒಂದು ದೊಡ್ಡಹಳ್ಳವಾಗಿ ಮಾರ್ಪಟ್ಟು ಪಾದಚಾರಿಗಳು ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡಿದೆ.
ಲಕ್ಷ್ಮಿ ವೆಂಕಟರಮಣ ಸ್ವಾಮಿ ರಸ್ತೆ ಹಾಗೂ ಹಳೆ ಕೆನರಾ ಬ್ಯಾಂಕ್ ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು ಪ್ರತಿದಿನ ಸಾವಿರ ಪಾದಚಾರಿಗಳು ಹಾಗೂ ವಾಹನಗಳು
ಸಂಚರಿಸುತ್ತವೆ. ಈ ಹಳ್ಳವು ಸುಮಾರು ವರ್ಷದಿಂದ ಹೀಗೆ ಇದ್ದು ಇದರ ಮೇಲೆ ಸ್ಥಳೀಯರು ಕಲ್ಲು ಚಪ್ಪಡಿ ಹಾಕಿ ಮುಚ್ಚಿದರು. ಆದರೆ ಇತ್ತಿಚೀನ ದಿನಗಳಲ್ಲಿ ಹಳ್ಳ ಮತ್ತಷ್ಟು ದೊಡ್ಡದಾಗಿ ರಸ್ತೆಯ ಅರ್ಧ ಭಾಗವನ್ನು ನುಂಗಿದೆ ಎಂದು ಸ್ಥಳೀಯ ವ್ಯಾಪಾರಸ್ಥ ರಮೇಶ್ ದೂರಿದ್ದಾರೆ. ಈ ರೀತಿಯಲ್ಲಿರುವ ಹಳ್ಳದಲ್ಲಿ ವಾರಕ್ಕೊಮ್ಮೆಯಾದರೂ ಓಡಾಡುವಾಗ ಬೀಳುವುದು, ಕೈಕಾಲು ಮುರಿದು ಕೊಳ್ಳುವುದು ಸಹಜವಾಗಿದೆ ಎಂದು ಎ.ಆರ್.ಜಿ ಮುರುಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭಾಗ 10ನೇ ವಾರ್ಡ್ನಲ್ಲಿದ್ದು ಈ ಸ್ಥಳದಿಂದ ಕೂಗಳತೆಯ ದೂರದಲ್ಲಿರುವ ಪಟ್ಟಣದ ಆಡಳಿತ ಸಂಸ್ಥೆಯ ಪುರಸಭೆಯವರು ಯಾವ ಉದ್ದೇಶದಿಂದ ಇದರ ಬಗ್ಗೆ ನಿರ್ಲಕ್ಷ್ಯ ತೊರುತ್ತಿದ್ದಾರೆಎಂದು ತಿಳಿಯದಂತಾಗಿದೆ. ಇದೇ ರಸ್ತೆಯಲ್ಲಿ ವಾರ್ಡ್ನ ಜನ ಪ್ರತಿನಿಧಿಗಳು ಸಂಬಂಧಪಟ್ಟ ಅಧಿಕಾರಿಗಳು ಓಡಾಡುವುದು ಸಹಜ. ಇತ್ತ ಗಮನ ಹರಿಸಿ ವ್ಯವಸ್ಥೆ ಸರಿಪಡಿಸಬೇಕು ಎಂದು ಸಾರ್ವಜನಿಕರು ಹಾಗೂ ರಸ್ತೆಯಲ್ಲಿ ಓಡಾಡಲು ಅನುಕೂಲ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.