ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕರವೇ ವಿಶಿಷ್ಟ ರಾಜ್ಯೋತ್ಸವ: ವಿಕಲಚೇತನ ವ್ಯಕ್ತಿಗೆ ಸನ್ಮಾನ

Vishwanath S
Updated On : 14 Nov 2013, 12:55 pm

ದೊಡ್ಡಬಳ್ಳಾಪುರ: ನಿಜವಾದ ಕನ್ನಡದ ಪ್ರಚಾರಕನೊಬ್ಬನನ್ನು ಗುರ್ತಿಸಿ ಗೌರವಿಸುವ ಮೂಲಕ ದೊಡ್ಡಬಳ್ಳಾಪುರ ಕರವೇ ಘಟಕ ಅರ್ಥಪೂರ್ಣವಾಗಿ ರಾಜ್ಯೋತ್ಸವ ಆಚರಿಸಿದೆ ಎಂದು ಕರವೇ ರಾಜ್ಯಾಧ್ಯಕ್ಷ ಶಿವರಾಮೇಗೌಡ ಅಭಿಪ್ರಾಯಪಟ್ಟರು.
ಇಲ್ಲಿನ ಟಿಎಪಿಎಂಸಿಎಸ್‌ನ ಮುಂದೆ ರಸ್ತೆಬದಿ ಕನ್ನಡ ಪುಸ್ತಕ ಮಾರಾಟ ಮಾಡುತ್ತಾ ನಿರಂತರವಾಗಿ ಕನ್ನಡದ ಕೈಂಕರ್ಯ ಮಾಡುತ್ತಿರುವ ವಿಕಲಚೇತನ ವ್ಯಕ್ತಿ ರೆಡ್‌ಡಪ್ಪಶೆಟ್ಟಿ ಅವರನ್ನು ಸನ್ಮಾನಿಸುವ ಮೂಲಕ ಮಂಗಳವಾರ ಸರಳವಾಗಿ ಆಚರಿಸಲಾದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿವೃತ್ತ ಅಧ್ಯಾಪಕ ಬಿ.ಎಲ್.ರಾಮಕೃಷ್ಣ ಮಾತನಾಡಿ, ಪುಸ್ತಕ ಓದುವುದು ಹವ್ಯಾಸವಾಗಬೇಕು. ಅದು ಬದುಕಾಗಬೇಕು. ಆಗ ಮಾತ್ರವೇ ನೈಜ ಭಾಷಾಭಿಮಾನ ಮತ್ತು ಜ್‌ಞಾನ ಸಂವೇದನೆಗಳ ಬೆಳವಣಿಗೆಗೆ ಕಾರಣವಾಗುತ್ತದೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಬಿ.ಎಸ್.ಚಂದ್ರಶೇಖರ್, ತಾಲೂಕು ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ, ಕಾನೂನು ಸಲಹೆಗಾರ ರವಿ ಮಾವಿನಕುಂಟೆ, ಮುಖಂಡರಾದ ಬಷೀರ್,ಸೋಮಶೇಖರ್, ಎಂ.ಕೃಷ್ಣಮೂರ್ತಿ, ಕಸಾಪ ಜಿಲ್ಲಾಧ್ಯಕ್ಷ ಹುಲಿಕಲ್ ನಟರಾಜ್, ಸಂಸ್ಕೃತಿ ಟ್ರಸ್ಟ್ ಅಧ್ಯಕ್ಷ ನಾಗೇಶ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement