ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಲಿಷ್ಠ ಭಾರತಕ್ಕಾಗಿ ನರೇಂದ್ರಮೋದಿ ಪ್ರಧಾನಿ ಆಗಲಿ: ಸುರೇಶ್ ಕುಮಾರ್

Vishwanath S
Updated On : 14 Nov 2013, 12:53 pm

ಕ.ಪ್ರ.ವಾರ್ತೆ ,  ಮಾಗಡಿ ,  ನ.13
ಬಲಿಷ್ಠ ಭಾರತಕ್ಕಾಗಿ ನರೇಂದ್ರಮೋದಿ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಲೇಬೇಕು ಎಂದು ಶಾಸಕ ಸುರೇಶ್ ಕುಮಾರ್ ಹೇಳಿದರು.
ಅವರು ಮಾಗಡಿಯಲ್ಲಿ ತಾಲೂಕು ಬಿಜೆಪಿ ಏರ್ಪಡಿಸಿದ್ದ ಭಾರತ ಗೆಲ್ಲಿಸಿ ಯಾತ್ರೆ ಮತ್ತು ಬೃಹತ್  ಬೆ ೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡುತ್ತಾ ಈ ದೇಶದ ಅತ್ಯಂತ ದುರ್ಬಲ ಪ್ರಧಾನ ಮಂತ್ರಿ  ಮನಮೋಹನ್ ಸಿಂಗ್, ಇವರಿಂದ ದೇಶ ದಿನೇ ದಿನೇ ದುರ್ಬಲವಾಗುತ್ತಿದೆ. 60 ವರ್ಷಗಳನ್ನಾಳಿದ  ಕಾಂಗ್ರೆಸ್ ಸರ್ಕಾರದಿಂದ ಜನತೆಗೆ ಅನ್ಯಾಯವಾಗಿದೆ. ಕೇವಲ ಭ್ರಷ್ಟಾಚಾರ, ಅಕ್ರಮಗಳಿಕೆ  ನಡೆದಿದ್ದು, ಬದಲಾವಣೆ ಕಾಣದೆ, ದೇಶ ಅಧೋಗತಿಯತ್ತ ಸಾಗಿದೆ. ನ.17 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ  ನಡೆಯಲಿರುವ ಬೃಹತ್ ಭಾರತ ಗೆಲ್ಲಿಸಿ  ರ್ಯಾಲಿಯಲ್ಲಿ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವಾಣಿ ಕೇಳಲು ಸುಮಾರು 5 ಲಕ್ಷ ಮಂದಿ ಈಗಾಗಲೇ ಟಿಕೆಟ್ ಪಡೆದು ಕಾದು ಕುಳಿತಿದ್ದಾರೆ ಎಂದರು.
ಒಮ್ಮೆ ಮೋದಿ ಅವರನ್ನು ಪ್ರಧಾನ ಮಂತ್ರಿ ಮಾಡಿದರೆ ಸಾಕು ಈಡೀ ದೇಶವೇ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುವುದರಲ್ಲಿ ಸಂದೇಹವಿಲ್ಲ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ನಾಗರಾಜು, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಪ್ರಸಾದ್, ತಾಲೂಕು ಅಧ್ಯಕ್ಷ ಡಾ. ನವೀನ್, ಜಿಲ್ಲಾ ಉಪಾಧ್ಯಕ್ಷ ನಾರಾಯಣಸ್ವಾಮಿ, ಕೆ.ಎಸ್.ಹರೀಶ್, ಎಂ.ಟಿ. ಶಿವಣ್ಣ, ಟಿ.ಆರ್. ದಯಾನಂದ್, ಬಾಲಾಜಿ, ಜಯರಾಮು, ಮೋಹನ್‌ಕುಮಾರ್, ಚಂದ್ರು,ಸಿದ್ದಪ್ಪ, ಪ್ರವೀಣ್, ಮಹೇಶ್, ಮಹಾಂತೇಶ್ ಇತರರು ರ್ಯಾಲಿಯಲ್ಲಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement