ಮೂಢನಂಬಿಕೆ ವಿರೋಧಿ ಮಸೂದೆ ಜಾರಿಗೆ ಬರಲಿ: ಒತ್ತಾಯ
ದೊಡ್ಡಬಳ್ಳಾಪುರ: ಮೂಡನಂಬಿಕೆ ಆಚರಣೆ ನಿಷೇಧ ಮಸೂದೆ ಜಾರಿಗೆ ತರುವ ಬಗ್ಗೆ ಹಿಂಜರಿಯುವುದು ಬೇಡ. ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಬಾನಾಮತಿ, ಕಂದಾಚಾರ, ವಾಮಾಚಾರ, ನರಬಲಿ, ಪವಾಡ, ಜ್ಯೋತಿಷ್ಯದಂತಹ ಆಚರಣೆಗಳ ವಿರುದ್ಧ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದು ಪವಾಡ ಭಂಜಕ ಹುಲಿಕಲ್ ನಟರಾಜ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಸ್ವಹಿತಾಸಕ್ತಿಗಾಗಿ ಕರಡು ಮಸೂದೆ ವಿರೋಧಿಸುವ ಮೊದಲು ಸತ್ಯಾಸತ್ಯತೆಯ ಅರಿವು ಮುಖ್ಯ. ರಾಜಕೀಯಕ್ಕಾಗಿ ವಿರೋಧ ಎನ್ನುವಂತಾಗಬಾರದು. ದುರ್ಬಲ ಮನಸ್ಸು ನೆಮ್ಮದಿಯಿಂದ ಬದುಕಬೇಕಾದರೆ ಮಸೂದೆ ಜಾರಿಯಾಗಬೇಕು. ಮೂಡನಂಬಿಕೆ ಹೆಸರಲ್ಲಿ ಮಾನಸಿಕ ಅಸ್ವಸ್ಥರನ್ನಾಗಿರುವ ಈ ಹಗಲು ದರೋಡೆ ಬೇಕೇ ಬೇಡವೇ ಎಂಬುದನ್ನು ಜನ ನಿರ್ಧರಿಸಲಿ. ಧ್ವನಿಯೆತ್ತುವ ಮೊದಲು ನಂಬಿಕೆ ಮತ್ತು ಮೌಢ್ಯದ ಅರ್ಥ ತಿಳಿದುಕೊಳ್ಳಲಿ ಎಂದು ಅವರು ಹೇಳಿದ್ದು, ಮುಖ್ಯಮಂತ್ರಿಗಳು ಬಹಿರಂಗ ಚರ್ಚೆ ಅವಕಾಶ ನೀಡುವುದಾಗಿ ಸಿಎಂ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.