ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕನ್ನಡಿಗರು ಸ್ವಾಭಿಮಾನಿಗಳಾಗಲಿ: ಶಾಸಕ

Vishwanath S
Updated On : 16 Nov 2013, 1:00 am

ಕ.ಪ್ರ.ವಾರ್ತೆ ,  ಮಾಗಡಿ ,  ನ.15
ಕನ್ನಡಿಗರು ಸ್ವಾಭಿಮಾನಿಗಳಾಗಬೇಕು ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ನುಡಿದರು.
ಅವರು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಾಡಹಬ್ಬಗಳ ಆಚರಣಾ ಸಮಿತಿ ಏರ್ಪಡಿಸಿದ್ದ ಮಾಗಡಿ ಹಬ್ಬ ಹಾಗು 58ನೇ ಅದ್ದೂರಿ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ ನಾಡಿನ ಭಾಷೆಗೆ ತನ್ನದೇ ಆದ ಪರಂಪರೆ, ಸಂಸ್ಕೃತಿ, ಇತಿಹಾಸವಿದೆ.  ನಾಡಿಗಾಗಿ ದುಡಿದ ಮಹನೀಯರ ಕೊಡುಗೆ ಅನನ್ಯವಾದುದು, ತಾಯಿ ನಾಡಿನ ಸೇವೆ ಸದಾ  ಬದ್ಧರಾಗಿ, ದೇಶ ಪ್ರೇಮ,ದೇಶಭಕ್ತಿ ಬೆಳೆಸಿಕೊಳ್ಳಬೇಕು. ಕನ್ನಡದ ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ಕಲೆಗಳ ಬೀಡು ಕರ್ನಾಟಕ. ಜಾತ್ಯತೀತ ಭಾರತೀಯರಾದ ನಾವು  ಸರ್ವಜನಾಂಗದ ಶಾಂತಿಯ ತೋಟದಲ್ಲಿನ ಪರಿಮಳ ಬೀರುವ  ಸುಗಂಧ ಪುಷ್ಪಗಳಾಗಬೇಕು. ಈ ನಿಟ್ಟಿನಲ್ಲಿ  ನಾಡಿನ ಸಕಲ ಸಂಪತ್ತನ್ನು ನಾವೆಲ್ಲರೂ ರಕ್ಷಸಿಸಬೇಕಿದೆ ಎಂದರು.   
ತಹಸೀಲ್ದಾರ್ ಸಿ.ಎಚ್.ಶಿವಕುಮಾರ್  ಮಾತನಾಡಿ ಕನ್ನಡಕ್ಕಾಗಿ ಹೋರಾಟ ಮಾಡಿದ ಅನೇಕ ಮಹನೀಯರಲ್ಲಿ ಆಲೂರು ವೆಂಕಟರಾಯರು ಪ್ರಮುಖರಾಗಿದ್ದಾರೆ. ಅವರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯೋಣ. ಭಾರತೀಯರಾದ ನಾವೆಲ್ಲರೂ ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ರಾಷ್ಟ್ರದ ಭಾವೈಕ್ಯತೆಯನ್ನು ಕಾಪಾಡಬೇಕು. ಮಾನವೀಯತೆ ಇರಲಿ, ದೇಶಕ್ಕೆ ತನ್ನದೇ ಆದ ಕೊಡುಗೆ ಕೊಡುವ ಮೂಲಕ ನಾಡನ್ನು ಸುಭುದ್ರವಾಗಿ ಕಟ್ಟೋಣ ಎಂದರು.
ನಿತ್ಯೋತ್ಸವವಾಗಲಿ: ತಾ.ಪಂ. ಅಧ್ಯಕ್ಷ ಜಿ. ಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ರಾಜ್ಯೋತ್ಸವ ಕೇವಲ ನವೆಂಬರ್  ಉತ್ಸವವನ್ನಾಗಿಸದೆ ನಿತ್ಯೋತ್ಸವವನ್ನಾಗಿ ಆಚರಿಸೋಣ, ಪ್ರತಿ ಮನೆ ಮನದಲ್ಲಿ ಕನ್ನಡ ಜ್ಯೋತಿಯನ್ನು ಹೊತ್ತಿಸೋಣ ಎಂದರು.
ಬಹುಮಾನ ವಿತರಣೆ: ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ 125ಕ್ಕೆ 125 ಅಂಕ ಗಳಿಸಿದ ಮಾಗಡಿ ಕೆಂಪೇಗೌಡ ಪ್ರೌಢಶಾಲೆಯ ವಿದ್ಯಾರ್ಥಿನಿ ಪವಿತ್ರಗೆ ಶಾಸಕ ಎಚ್.ಸಿ. ಬಾಲಕೃಷ್ಣ ಟೈಟಾನ್ ವಾಟ್ ಬಹುಮಾನವಾಗಿ ನೀಡಿ ಗೌರವಿಸಿದರು.
ಪಥಸಂಚಲನ: ಇದೇ ವೇಳೆ ಶಾಲಾ ಮಕ್ಕಳಿಂದ ಪಥಸಂಚಲನ ನಡೆಯಿತು. ಸಾಂಸ್ಕೃತಿಕ ಕಲಾ ತಂಡಗಳು ಉತ್ತಮ ಪ್ರದರ್ಶನ ನೀಡಿದವು. ವಿವಿಧ ಇಲಾಖೆ ಸ್ತಬ್ಧ ಚಿತ್ರಗಳ ಪ್ರದರ್ಶನಗಳು, ಕಲಾ ತಂಡಗಳು ಪಟ್ಟಣದ ಪ್ರಮುಖ ಬೀದಿಯಲ್ಲಿ ಭವ್ಯ ಮೆರವಣಿಗೆ ನಡೆಯಿತು.
ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಮುದ್ದುರಾಜ ಯಾದವ್, ಜಿ.ಪಂ. ಸದಸ್ಯ ವಿಜಯಕುಮಾರ್, ರಂಗಸ್ವಾಮಿ, ತಾ.ಪಂ. ಉಪಾಧ್ಯಕ್ಷೆ ಭಾರತಿ ಮಹದೇವಯ್ಯ, ಸದಸ್ಯ ಬಿ.ಟಿ. ವೆಂಕಟೇಶ್, ಕಾಂತರಾಜು, ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ಪುರಸಭೆ ಸದಸ್ಯೆ ಹೊಂಬಮ್ಮ, ಬಸವರಾಜು, ನಾಗೇಂದ್ರ, ರಂಗನಾಥ್, ತಾ.ಪಂ. ಇಓ ಕೆ.ಬಿ. ಅಕ್ಕೋಜಿ, ಪುರಸಭೆ ಮುಖ್ಯಾಧಿಕಾರಿ ಕೆ.ಕೆ. ಮುತ್ತಪ್ಪ, ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕ ನಾಗರಾಜು, ದೈಹಿಕ ಶಿಕ್ಷಣ ಶಿಕ್ಷಕ ಪ್ರಹ್ಲಾದ್ ರಾವ್, ನಾಗಯ್ಯ, ಅರಸನಾಳ್, ಮೂರ್ತಿ, ಜಯರಾಮು, ವೆಂಕಟೇಶ್  ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement