ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜನಪದ ಉಳಿವಿಗೆ ಯುವಜನ ಶ್ರಮಿಸಲಿ

Vishwanath S
Updated On : 16 Nov 2013, 12:59 pm

ಕ.ಪ್ರ.ವಾರ್ತೆ ,  ರಾಮನಗರ ,  ನ.15
ಜಾಗತೀಕರಣ, ಖಾಸಗೀಕರಣದ ಭರಾಟೆಗೆ ಸಿಲುಕಿ ನಮ್ಮ ಮೂಲ ಸಂಸ್ಕೃತಿಯಾದ ಜಾನಪದವು ಅವಸಾನದ ಅಂಚಿಗೆ ತಲುಪಿದೆ. ಇದನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಸಾಹಿತಿ ಬ್ಯಾಡರಹಳ್ಳಿ ಶಿವಕುಮಾರ್ ತಿಳಿಸಿದರು.
ನಗರದ ಹನುಮಂತನಗರದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಮತ ಟ್ರಸ್ಟ್ ಹಮ್ಮಿಕೊಂಡಿದ್ದ ಜಾನಪದ ಸಂಗೀತೋತ್ಸವ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಪದವು ನಮ್ಮ ಸಂಸ್ಕೃತಿಯ ಮೂಲವಾಗಿದೆ. ಜನಪದ ಸಂಸ್ಕೃತಿ ನಶಿಸಿದರೆ ನಮ್ಮ ಸಂಸ್ಕೃತಿ ನಾಶವಾದಂತೆ ಎಂದರು.
ಇಂದಿನ ಯುವಜನತೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ, ಅಂಧಾನುಕರಣೆ ಮಾಡುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚಿವೆ. ಚಲನಚಿತ್ರ ಹಾಗೂ ದೂರದರ್ಶನಗಳಲ್ಲಿ ಬರುವ ಕಾರ್ಯಕ್ರಮಗಳನ್ನು ಕುಟುಂಬ ಸಮೇತರಾಗಿ ವೀಕ್ಷಿಸಲು ಸಾಧ್ಯವಿಲ್ಲದಂತಾಗಿದೆ ಎಂದು ಹೇಳಿದರು.
ಗ್ರಾಮೀಣ ಸಂಸ್ಕೃತಿ ಸೊಗಡು: ಜನಪದ ಹಾಡುಗಳಲ್ಲಿ ಗ್ರಾಮೀಣ ಸಂಸ್ಕೃತಿಯ ಸೊಗಡಿದೆ. ಮನೆ ಮಂದಿಯೆಲ್ಲಾ ಕುಳಿತು ವೀಕ್ಷಿಸಬಹುದಾಗಿದೆ.
 ಪ್ರತಿಯೊಂದು ಹಾಡು, ಕುಣಿತದಲ್ಲಿಯೂ ಸಮಾಜಕ್ಕೆ ಒಂದು ಸಂದೇಶ ನೀಡುತ್ತದೆ. ಆರೋಗ್ಯಕರ ಹಾಗೂ ಸ್ವಾಸ್ಥ್ಯ ಸಮಾಜಕ್ಕೆ ಜನಪದವು ಟಾನಿಕ್ ಆಗಿದೆ ಎಂದು ತಿಳಿಸಿದರು.
ಜನಪದ ಸಂಸ್ಕೃತಿಗೆ ಸಂಬಂಧಿಸಿದ ವಿಚಾರಣ ಸಂಕಿರಣಗಳಿಂದ ವಿದ್ಯಾರ್ಥಿಗಳು ನಮ್ಮ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗಿರುತ್ತದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಭಾಗವಹಿಸಲು ಪ್ರೋತ್ಸಾಹ ದೊರೆಯಲಿದೆ ಕಾಲೇಜಿನ ಪ್ರಾಂಶುಪಾಲೆ ಎಚ್.ಸಿ. ಸುಜಾತಮ್ಮ ಅಭಿಪ್ರಾಯಪಟ್ಟರು.   ಸಮತ ಟ್ರಸ್ಟ್‌ನ ಕಾರ್ಯದರ್ಶಿ ರಾಣಿ, ಉಪನ್ಯಾಸಕ ನರಸಿಂಹಸ್ವಾಮಿ ಮಾತನಾಡಿದರು. ಎಚ್.ಎಸ್.ನಾಗರಾಜು, ಸಿದ್ದರಾಮು ಮತ್ತು ಜಗದೀಶ್‌ಮೂರ್ತಿ ಜಾನಪದ ಗೀತಗಾಯನ ನಡೆಸಿಕೊಟ್ಟರು. ಉಪನ್ಯಾಸಕರಾದ ಕರೀಗೌಡ, ಚಂದ್ರು, ಪ್ರಕಾಶ್, ಚಿಕ್ಕತಿಬ್ಬೇಗೌಡ ಭಾಗವಹಿಸಿದ್ದರು.
ಜನಪದ ಸಂಸ್ಕೃತಿಗೆ ಸಂಬಂಧಿಸಿದ ವಿಚಾರಣ ಸಂಕಿರಣಗಳಿಂದ ವಿದ್ಯಾರ್ಥಿಗಳು ನಮ್ಮ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗಿರುತ್ತದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಭಾಗವಹಿಸಲು ಪ್ರೋತ್ಸಾಹ ದೊರೆಯಲಿದೆ
-  ಸುಜಾತಮ್ಮ, ಪ್ರಾಂಶುಪಾಲೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement