ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆರ್ಯವೈಶ್ಯ ಸಮಾಜದ ವತಿಯಿಂದ ಶ್ರದ್ಧಾಂಜಲಿ

Mainashree
Updated On : 27 Nov 2013, 11:30 am

ನೆಲಮಂಗಲ: ಆರ್ಯವೈಶ್ಯ ಸಮಾಜದ ವಾಸವಿ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರಾನಂದಗಿರಿ ಸ್ವಾಮಿಗಳು ದೈವಾದೀನರಾಗಿದ್ದರಿಂದ  ಪಟ್ಟಣ ಆರ್ಯವೈಶ್ಯ ಸಮಾಜದ ವತಿಯಿಂದ ವಾಸವಿ ಕಲ್ಯಾಣ ಮಂದಿರದಲ್ಲಿ ಮಂಗಳವಾರ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸ್ವಾಮೀಜಿ ಅವರು ದೈವಾಧೀನರಾದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸಮಾಜದ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ ನಂತರ ಸಮಾಜದ ಅಧ್ಯಕ್ಷರಾದ ಡಾ. ಲಕ್ಷ್ಮೀನಾರಾಯಣಶೆಟ್ಟಿ ಮಾತನಾಡುತ್ತಾ ಶ್ರೀಗಳವರ ಸಮಾಜ ಸೇವೆ, ವಿದ್ವತ್ತು, ಸಾಧನೆಗಳನ್ನು ನೆನೆಯುವ ಮೂಲಕ ಅವರ  ಅಗಲಿಕೆಯಿಂದ ಸಮಾಜಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ತಿಳಿಸಿದರು.
ಸಮಾಜದ ಕಾರ್ಯದರ್ಶಿ ಬಿ.ಎಸ್.ಸತ್ಯನಾರಾಯಣಶೆಟ್ಟಿ, ಎನ್.ಆರ್.ಗೋವಿಂದರಾಜು ಗುಪ್ತ, ಎನ್.ಜಿ. ವೆಂಕಟಗೌರಿಶೆಟ್ಟಿ ಸೇರಿದಂತೆ ನೂರಾರು ಜನ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement