ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆಶ್ರಯ ಮನೆ ನಿರ್ಮಿಸಿ ಕೊಡುವಲ್ಲಿ ನಿರ್ಲಕ್ಷ್ಯ: ಪ್ರತಿಭಟನೆ

Mainashree
Updated On : 27 Nov 2013, 11:31 am

ನೆಲಮಂಗಲ: ಗುಡಿಸಲುಗಳಲ್ಲಿ ವಾಸವಾಗಿರುವ  ಕಡು ಬಡವರಿಗೆ ಆಶ್ರಯ  ಮನೆ ನಿರ್ಮಿಸಿ ಕೊಡುವಲ್ಲಿ ತಾಲೂಕು ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಜನಪರ ಹೋರಾಟಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಚಿಕ್ಕರಾಜು ಆರೋಪಿಸಿದರು.
ಅವರು ಪಟ್ಟಣದ ತಾಲೂಕು ಕಚೇರಿ ಮುಂಭಾಗ ಜನಪರ ಹೋರಾಟಗಳ ಒಕ್ಕೂಟದ ವತಿಯಿಂದ ಬಡ ಗುಡಿಸಲು ವಾಸಿಗಳಿಗೆ ಆಶ್ರಯಕ್ಕೆ ಜಮೀನು ನೀಡದ ತಾಲೂಕು ಅಧಿಕಾರಿಗಳ ನಿರ್ಲಕ್ಷ ಧೋರಣೆಯನ್ನು ವಿರೋಧಿಸಿ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.
ಬಡ ಗುಡಿಸಲು ವಾಸಿಗಳಿಗೆ ಶೀಘ್ರವೇ ಆಶ್ರಯ ಹಕ್ಕು ಪತ್ರ ವಿತರಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಬೇಕು. ಬಡ ಹೆಣ್ಣುಮಕ್ಕಳ ವಿವಾಹಕ್ಕೆ 2 ಲಕ್ಷ ರು. ಉಚಿತವಾಗಿ ಭರಿಸಬೇಕು ಹಾಗೂ ಬಡ ವೃದ್ಧರಿಗೆ ಅನ್ನಭಾಗ್ಯ ಕೇಂದ್ರ ಸ್ಥಾಪಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೆ ನಡೆಯಿತು. ಪ್ರತಿಭಟನಾಕಾರರು ಸರ್ಕಾರಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ತಹಸೀಲ್ದಾರ್ ಡಾ.ಗೀತಾ ಅವರಿಗೆ  ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ತಾಲೂಕು ಉಪಾಧ್ಯಕ್ಷ ಗುಂಡುಗೋಸಾಯಿ, ಖಜಾಂಚಿ ಕುಮಾರ, ಮಹಿಳಾ ಘಟಕ ಅಧ್ಯಕ್ಷೆ ಅಣ್ಣಮ್ಮ, ಉಪಾಧ್ಯಕ್ಷೆ ಗಾಯಿತ್ರಿ ಸೇರಿದಂತೆ ನೂರಾರು ಜನ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement