ಕಿಡಿಗೇಡಿಗಳಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ: ಪ್ರತಿಭಟನೆ
ಮಾಗಡಿ: ಕೆಲ ಕಿಡಿಗೇಡಿಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ಇಲ್ಲಿನ ಕಳ್ಳೀಪಾಳ್ಯದ ಶ್ರೀ ಭಕ್ತಮುನೇಶ್ವರಸ್ವಾಮಿ ಭಕ್ತರು ಸೋಲೂರು ಔಟ್ ಪೊಲೀಸ್ ಠಾಣೆ ಮುಂದೆ ಬುಧವಾರ ಬೃಹತ್ ಪ್ರತಿಭಟನಾ ಧರಣೆ ನಡೆಸಿದರು. ಮಾಗಡಿ ತಾಲೂಕಿನ ಕಳ್ಳೀಪಾಳ್ಯದ ಶ್ರೀ ಭಕ್ತಮುನೇಶ್ವರಸ್ವಾಮಿ ದೇವಾಲಯದಲ್ಲಿ ಮಾಟ, ಮಂತ್ರ, ಯಂತ್ರ, ತಂತ್ರಗಳನ್ನು ನಡೆಸುತ್ತಿದ್ದಾರೆ ಎಂದು ಕೆಲ ಕಿಡಿಗೇಡಿಗಳು ಅಪಪ್ರಚಾರ ಮಾಡುತ್ತಾ ದೇವಾಲಯಕ್ಕೆ ಬರುವ ಭಕ್ತ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗುತ್ತಿದೆ. ಇಲ್ಲಿ ಯಾವುದೇ ಮಾಟ ನಡೆಯುತ್ತಿಲ್ಲ. ಧಾರ್ಮಿಕ ಭಾವನೆ ಧಕ್ಕೆ ಉಂಟಾಗಿದೆ ಎಂದು ಹಿರಿಯರಾದ ಭಕ್ತರ ಮುಖಂಡ ತಮ್ಮಯ್ಯ ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಿಡಿಗೇಡಿಗಳನ್ನು ಬಂಧಿಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಭಕ್ತರಾದ ಜಯಕುಮಾರ್, ಸೋಲೂರು ಮೂರ್ತಿ, ಶಿವನಂಜಯ್ಯ, ಕಂಬಯ್ಯ, ಶ್ರೀನಿವಾಸ್, ರೇವಣ್ಣ ಸಿದ್ದಯ್ಯ, ಲಕ್ಷ್ಮೀನರಸಿಂಹಯ್ಯ, ಪುಷ್ಪ, ಪದ್ಮ, ಸಿದ್ದಮ್ಮ, ಪುಷ್ಪ,ಭಾಗ್ಯ ರತ್ನಮ್ಮ, ಲೀಲಾವತಿ, ಶಾಂತಮ್ಮ ಇತರರು ಇದ್ದರು.