ದೇವನಹಳ್ಳಿ ವಕೀಲರ ಸಂಘದಲ್ಲಿ ಕಾನೂನು ದಿನಾಚರಣೆ
ದೇವನಹಳ್ಳಿ: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಸಂಯುಕ್ತ ಆಶ್ರಯದಲ್ಲಿ ಕಾನೂನು ದಿನಾಚರಣೆಯನ್ನು ವಕೀಲರ ಸಂಘದಲ್ಲಿ ಮಂಗಳವಾರ ಆಯೋಜಿಸಲಾಗಿತ್ತು.
ಉದ್ಘಾಟನೆಯನ್ನು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಯು.ಎಂ.ಅಡಿಗ ನೆರವೇರಿಸಿ ಎಲ್ಲ ಪ್ರಜೆಗಳು ಮತ್ತು ವಕೀಲರು ಸಂವಿಧಾನಕ್ಕೆ ಗೌರವಿಸಬೇಕಾದ ದಿನವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್. ನಟರಾಜ್ ವಹಿಸಿ ಸಂವಿಧಾನದ ಕರಡನ್ನು ಅಂಗೀಕರಿಸಿದ ಮಹತ್ವದ ದಿನವಾಗಿದ್ದು ಉತ್ತಮ ನ್ಯಾಯಾಂಗ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಜೈಬುನ್ನಿಸ ಮಾತನಾಡಿ ಸಾಮಾನ್ಯ ಜನರಿಗೆ ಸಂವಿಧಾನದ ಪರಿಚಯವಾಗಬೇಕು ಎಂದರು.
ಇದೇ ಸಂಧರ್ಭದಲ್ಲಿ ವಕಾಲರ ಸಂಘದ ಅಧ್ಯಕ್ಷ ಎಂ.ಮಾರೇಗೌಡ ಹಾಗೂ ಎಪಿಪಿ ಗಣಪತಿ ಮಾತನಾಡಿದರು. ವಕೀಲರ ಸಂಘದ ಖಜಾಂಚಿ ಸಿ.ವೆಂಕಟೇಶ್ ನಿರೂಪಣೆ ಮಾಡಿದರು. ಕಾರ್ಯದರ್ಶಿ ಮುನಿರಾಜು ವಂದನೆ ಅರ್ಪಿಸಿದರು.