ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮರಾಠಿ ಪುಂಡಾಟಿಕೆ ನಿಲ್ಲಲಿ: ಮಂಜುನಾಥ ದೇವಾ

Mainashree
Updated On : 27 Nov 2013, 11:32 am

ಕ.ಪ್ರ. ವಾರ್ತೆ   ಆನೇಕಲ್ಲು   ನ.27
ಬೆಳಗಾವಿ ಕನ್ನಡ ನಾಡಿನ ಅವಿಭಾಜ್ಯ ಅಂಗ. ಎಂಇಎಸ್ ಆಗಾಗ ಪ್ರಚೋದನಕಾರಿಯಾಗಿ ವರ್ತಿಸಿ ನಾಡಿನ ಜನತೆಯ ನೆಮ್ಮದಿ ಕೆಡಿಸಿದ್ದಾರೆ. ಈ ಕೂಡಲೇ ಶಾಸಕ ಸಂಬಾಜಿ ರಾವ್ ಅವರ ಸದನ ಪ್ರವೇಶ ನಿರ್ಬಂಧಿಸಿ ಗಡೀಪಾರು ಮಾಡಬೇಕೆಂದು ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ ದೇವಾ ಆಗ್ರಹಿಸಿದ್ದಾರೆ.
ಅವರು ತಾಲೂಕಿನ ಅತ್ತಿಬೆಲೆ ಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಬೆಳಗಾವಿಯಲ್ಲಿ ಅಧಿವೇಶನ ನಡೆಯಬೇಕಾದರೇ ಅಡ್ಡಿಪಡಿಸುವ ಕಾಯಕವನ್ನು ರೂಡಿಸಿಕೊಂಡಿರುವ ಸಂಭಾಜಿ ರಾಜ್ಯದ ಪಾಲಿಗೆ ಖಳನಾಯಕರಾಗಿದ್ದಾರೆ. ಶಾಸಕ ಸ್ಥಾನದ ಜವಾಬ್ದಾರಿ ಮರೆತು ಬಾಯಿಗೆ ಬಂದಂತೆ ಹರಟುವ ಅವರನ್ನು ಸದನದಲ್ಲಿ ವಾಗ್ದಂಡನೆ ಶಿಕ್ಷೆ ನೀಡಬೇಕು ಎಂದರು.
ಕನ್ನಡ ಜಾಗೃತಿ ವೇದಿಕೆಯ ಗೌರವ ಅಧ್ಯಕ್ಷ ಹಾಗೂ ಸಾಹಿತಿ ತಾನಂ ಕುಮಾರಸ್ವಾಮಿ ಮಾತನಾಡಿ ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವ ನಡೆಸುವಾಗ ಈತ ಮಹಾ ಮೇಳಾವ ನಡೆಸುವ ಪ್ರಯತ್ನ ಮಾಡುತ್ತಾನೆ.  ಜಿಲ್ಲಾಡಳಿತ ಎಂಇಎಸ್ ಕೈಗೊಂಬೆಯಾಗಿದೆ. ಕನ್ನಡ ಬಾವುಟ ಹಾರಾಟ, ಹಳ್ಳಿಗಳಿಗೆ ನಾಮಫಲಕ ಮುಂತಾದ ಕನ್ನಡ ಜಾಗೃತಿ ಕಾರ್ಯಕ್ರಮ ಮಾಡಿದರೆ ಕೇಸು ದಾಖಲಿಸಿ ತೊಂದರೆ ಮಾಡುತ್ತಾರೆ. ಇನ್ನು ಮುಂದೆ ಕನ್ನಡದ ಕೆಲಸ ಮಾಡುವುದಿಲ್ಲವೆಂದು ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡುತ್ತಾರೆ. ಅಧಿಕಾರಿಗಳ ಉಪಟಳ ಸಹಿಸದ ಕನ್ನಡಿಗರು ನಿರ್ವೀಯರಾಗಿದ್ದಾರೆ. ಅಧಿವೇಶನಕ್ಕಷ್ಟೇ ಸೀಮಿತಗೊಳಿಸದೇ
ಬೆಳಗಾವಿಯ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳಬೇಕು. ಶಕ್ತಿ ಸೌಧದಲ್ಲಿ ಕನ್ನಡ ಅಧ್ಯಯನ ಕೇಂದ್ರ ನಿರ್ಮಿಸಿ ಕವಿಗಳೂ, ಸಾಹಿತಿಗಳು ಹಾಗೂ ಬರಹಗಾರರಿಗೆ ನಿರಂತರ ಚಟುವಟಿಕೆ ಕೇಂದ್ರವನ್ನಾಗಿಸಬೇಕೆಂದರು.
ಕೆಲ ಕಾಲ ರಸ್ತೆ ಸಂಚಾರ ಸ್ತಬ್ಧವಾಗಿ ವಾಹನಗಳ ದಟ್ಟಣ ಉಂಟಾಗಿತ್ತು. ಕನ್ನಡ ಸೋಮು, ಮಣಿ ಸೇರಿದಂತೆ ಮುಖಂಡರು ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement