ಜನ ನಿಬಿಡ ಜಾಗದಲ್ಲಿ ಧೂಮಪಾನ; ಕಾನೂನು ಕ್ರಮ
ವಿಜಯಪುರ: ಪಟ್ಟಣದ ರಸ್ತೆ ಬದಿಗಳಲ್ಲಿ ನಾಮಫಲಕಗಳು ಹಾಗೂ ಫ್ಲೆಕ್ಸ್ ಬೋರ್ಡ್ಗಳು ಎಲ್ಲಂದರಲ್ಲಿ ಹಾಕುವುದರಿಂದ ರಸ್ತೆ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿರುವುದನ್ನು ಮನಗಂಡ ಪೊಲೀಸರು ಇವುಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದರು. ರಸ್ತೆಯ ಬದಿಗಳಲ್ಲಿ ಜನ ಸಾಮಾನ್ಯರು ಓಡಾಡಲು, ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಅನುವು ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣದ ಆರಕ್ಷಕ ಉಪನೀರಿಕ್ಷಕ ಶಿವಕುಮಾರ್ ಮಾತನಾಡಿ ಹಿರಿಯ ಅಧಿಕಾರಿಗಳ ಮೂರ್ಗದರ್ಶನದಲ್ಲಿ ಈ ಕಾರ್ಯ ನಡೆಸಲಾಗಿದ್ದು ದ್ವಿಚಕ್ರ ವಾಹನದಲ್ಲಿ 3 ಜನ ಹೋಗುವುದು, ಲೈಸೆನ್ಸ್ ಇಲ್ಲದೇ, ಮದ್ಯ ಸೇವಿಸಿ ಮೊಬೈಲ್ ಬಳಸಿಕೊಂಡು ವಾಹನ ಚಲಾಯಿಸುವುದು ಹಾಗೂ ಜನ ನಿಬಿಡ ಪ್ರದೇಶದಲ್ಲಿ ಧೂಮಪಾನ ಮಾಡುವುದು ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ವಿವರಣೆ ನೀಡಿದರು.